• Slide
  Slide
  Slide
  previous arrow
  next arrow
 • ಮಾ.31ಕ್ಕೆ ಶರಾವತಿ ನದಿಗೆ ದೀಪ ನಮನ

  300x250 AD


  ಹೊನ್ನಾವರ: ಶರಾವತಿ ಆರತಿ ಸಮಿತಿ ಆಶ್ರಯದಲ್ಲಿ ಮಾ.31ರ ಸಂಜೆ 6 ಗಂಟೆಗೆ ಶರಾವತಿ ನದಿಯ ದಡದಲ್ಲಿ ನಿಂತು ತಾಯಿ ಶರಾವತಿಗೆ ದೀಪವನ್ನು ಬೆಳಗುವ ಮೂಲಕ ನಮನ ಸಲ್ಲಿಸುವ ಭಾವನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಾವತಿ ಆರತಿ ಸಮಿತಿಯ ತಾಲೂಕ ಗೌರವಾಧ್ಯಕ್ಷ ಜೆ. ಟಿ. ಪೈ ಹೇಳಿದರು.
  ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ಜಾತಿ, ಮತ, ಪಕ್ಷಭೇದ ಮರೆತು ಸಾಮರಸ್ಯದ ಮನೋಭಾವದಿಂದ ಶರಾವತಿ ನದಿಗೆ ಆರತಿ ಬೆಳಗಿಸಿ ನಮನ ಸಲ್ಲಿಸಲಾಗುವುದು.  ತಾಲೂಕಿನ ಮೀನುಗಾರರು, ದೋಣಿ ಮಾಲೀಕರು, ಮರಳುಗಾರಿಕೆ ವೃತ್ತಿ ಮಾಡುವವರು, ಕೃಷಿಕರು ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಕೈ ಜೋಡಿಸುವ ಮೂಲಕ ಕಾರ್ಯಕ್ರಮ ಯಶ್ವಸಿಗೆ ಸಹಕರಿಸಲಿದ್ದಾರೆ ಎಂದರು.
  ಸೇಪ್ ಸ್ಟಾರ್ ಮ್ಯಾನೇಜಿಂಗ್ ಡೈರಕ್ಟರ್ ಜಿ.ಜಿ.ಶಂಕರ್ ಮಾತನಾಡಿ, ಕೃಷಿ ಮೀನುಗಾರಿಕೆಗೆ, ಮರಳುಗಾರಿಕೆ ಸೇರಿ ವಿವಿಧ ಉದ್ಯೋಗದ ಮೂಲಕ ಶರಾವತಿ ನದಿಯ ಹಲವರಿಗೆ ಜೀವನಾಧಾರವಾಗಿದೆ. ಇವರೆಲ್ಲರು ನಮಿಸುವ ಮೂಲಕ ನದಿಗೆ ಗೌರವಿಸಬೇಕು. ದೇವಸ್ಥಾನದ ಧರ್ಮದರ್ಶಿಗಳು, ಆಡಳಿತ ಮಂಡಳಿಯವರು, ಸಂಘ ಸಂಸ್ಥೆಯ ಪ್ರತಿನಿಧಿಗಳು, ಸಾರ್ವಜನಿಕರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಪೊತ್ಸಾಹಿಸಬೇಕು ಎಂದು ಮನವಿ ಮಾಡಿದರು.
  ಸಮಿತಿಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ, ಜೀವನದಿಯಾದ ಶರಾವತಿ ನದಿಯು ಕೃಷಿ ಮರಳುಗಾರಿಕೆ, ಪ್ರವಾಸೊದ್ಯಮದಿಂದ ಈ ಭಾಗದವರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ. ಈ ಜೀವನದಿಗೆ ಆರತಿ ಮಾಡುವ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಈ ವರ್ಷ ಏಕಕಾಲದಲ್ಲಿ ಐದು ಆರತಿ ಮಾಡುತ್ತಿದ್ದೇವೆ. ಐದು ಜನ ಪುರೋಹಿತರು ಒಂದೇ ರೀತಿಯ ಸಮವಸ್ತ್ರ ಧರಿಸಿ ಕಾಶಿ ಮಾದರಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶರಾವತಿ ನದಿಗೆ ಪೂಜೆ ಸಲ್ಲಿಸಲಿದ್ದೇವೆ ಎಂದರು.
  ಈ ಸಂದರ್ಭದಲ್ಲಿ ಶರಾವತಿ ಆರತಿ ಸಮಿತಿಯ ಕಾರ್ಯದರ್ಶಿ ವಿಶ್ವನಾಥ್ ನಾಯಕ, ರಾಜು ಭಂಡಾರಿ, ಸುರೇಶ ಹೊನ್ನಾವರ, ವಿಜು ಕಾಮತ್, ಎಂ.ಎಸ್.ಹೆಗಡೆ ಕಣ್ಣಿ, ಲೋಕೇಶ್ ಮೇಸ್ತ, ಕುಮಾರ ಮಾರ್ಕಾಂಡೇಯಾ, ಪ್ರಶಾಂತ ನಾಯ್ಕ ಇತರರು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top