Slide
Slide
Slide
previous arrow
next arrow

ಪದವಿ ಧಿರಿಸಿನಲ್ಲಿ ಮಿಂಚಿದ ಯುಕೆಜಿ ವಿದ್ಯಾರ್ಥಿಗಳು

300x250 AD


ಹೊನ್ನಾವರ: ಹೊಸ ಹೊಸ ಚಟುವಟಿಕೆಯನ್ನು ಮಾಡಿ ಮಕ್ಕಳ ಬೆಳವಣಿಗೆಯ ಬಗೆಗೆ ಪೂರಕವಾಗಿ ಸದಾ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿರುವ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಸ್ಕೂಲ್ ಯು.ಕೆ.ಜಿ ಮಕ್ಕಳಿಗೆ ಗ್ರಾಜ್ಯುಯೇಶನ್ ಡೇ ಅನ್ನುವ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಂಡಿತ್ತು.
ಸೆಂಟ್ರಲ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹೋಲಿ ರೋಸರಿ ಕಾಲೇಜಿನ ಉಪನ್ಯಾಸಕಿ ಸಜಿತಾ ಶಿವಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಜಿತಾ ಶಿವಪ್ರಸಾದ್, ವಿದ್ಯಾರ್ಥಿಗಳ ಅಂಕವನ್ನು ನೋಡಿ ಅವರನ್ನು ಅಳೆಯಬೇಡಿ. ಅವರನ್ನು ಯಾರ ಜೊತೆಗೂ ಹೋಲಿಕೆಯನ್ನು ಮಾಡಬೇಡಿ ಎಂಬ ಕಿವಿಮಾತನ್ನು ಹೇಳಿದರು. ಯಾವುದೇ ವಿದ್ಯಾರ್ಥಿಯನ್ನು ಧೈರ್ಯಗೆಡುವಂತೆ ಮಾಡಬೇಡಿ ಎಂದರು.
ಇಂತಹ ಕಾರ್ಯಕ್ರಮಗಳು ನಿಜಕ್ಕೂ ಪ್ರೇರಣಾದಾಯಕ. ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳು ಅಮೂಲ್ಯ. ಮಕ್ಕಳ ಬೆಳವಣಿಗೆಯನ್ನು ನೋಡಿ ಹುರಿದುಂಬಿಸಬೇಕು. ವಿದ್ಯಾರ್ಥಿಗಳಿಗೆ ಸಮಯದ ಅರಿವನ್ನು ನೀಡಬೇಕು ಎಂದು ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಜಿ.ಪಿ.ಹೆಗಡೆ ಮಾತನಾಡಿದರು.
ಮಕ್ಕಳನ್ನು ಪ್ರೀತಿಯಿಂದ ತಾಯಿಯಂತೆ ನೋಡಿ, ಶಿಕ್ಷಣ ನೀಡಿದ ಶಿಕ್ಷಕರಿಗೆ ಶುಭ ಹಾರೈಸಿದರು. ಮಕ್ಕಳು ಮಾಡುವ ಒಳ್ಳೆಯ ಕೆಲಸಕ್ಕೆ ಏಕಾಭಿಪ್ರಾಯದಿಂದ ಪಾಲಕರು ಪ್ರೋತ್ಸಾಹಿಸಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಎಸ್.ಎಮ್ ಭಟ್‌ರವರು ಸಲಹೆಯನ್ನು ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಾಂತಿ ಭಟ್‌ಎಲ್ಲರನ್ನು ಸ್ವಾಗತಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯು.ಕೆ.ಜಿಎಲ್ಲಾ ವಿದ್ಯಾರ್ಥಿಗಳು ಕಥೆ, ನೃತ್ಯ, ಹಾಡುಗಳ ಮೂಲಕ ಎಲ್ಲರನ್ನೂ ಮನರಂಜಿಸಿದರು. ನಂತರ ಅತಿಥಿಗಳಿಂದ ಯು.ಕೆ.ಜಿ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಕೊಡಲಾಯಿತು. ಶಿಕ್ಷಕಿ ಸಿಲಿಕಾ ಎಲ್ಲರನ್ನು ಸ್ವಾಗತಿಸಿದರು, ರೂಪಾ ರೊಡ್ರಿಗೀಸ್ ಅನಿಸಿಕೆಯನ್ನು ಹೇಳಿದರು. ತಾರಾಶ್ರೀ ಹೆಗಡೆ ಎಲ್ಲರನ್ನು ವಂದಿಸಿದರು. ಶಿಕ್ಷಕರಾದ ನಿತೇಶ ಶೇಟ್‌ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top