• Slide
    Slide
    Slide
    previous arrow
    next arrow
  • ಏ.2ಕ್ಕೆ ಸಾಹಿತ್ಯ ಚಿಂತಕರ ಚಾವಡಿಯಿಂದ ‘ಸಾಹಿತ್ಯ-ಸಂಭ್ರಮ’

    300x250 AD

    ಶಿರಸಿ: ನಗರದ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿಯ ವತಿಯಿಂದ‌ ಏ.2,ರವಿವಾರದಂದು ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ, ಕವಿಗೋಷ್ಟಿ, ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

    ಹಿರಿಯ ಪತ್ರಕರ್ತರೂ, ಕವಿಗಳು ಆದ ಜಯರಾಮ ಹೆಗಡೆ ಸಮಾರಂಭ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಡಿ.ಎಸ್.ನಾಯ್ಕ ಸರ್ವಾಧ್ಯಕ್ಷತೆ ವಹಿಸುವರು. ಚಿಂತಕರ ಚಾವಡಿಯ ಗೌರವಾಧ್ಯಕ್ಷರಾದ ಮಂಜುನಾಥ ಹೆಗಡೆ ಹೂಡ್ಲಮನೆ, ಖ್ಯಾತ ವಿಮರ್ಷಕರಾದ ಸುಬ್ರಾಯ ಮತ್ತೀಹಳ್ಳಿ, ಕವಿ ಎ.ಎನ್.ರಮೇಶ ಕೈಗಾ, ಹಿರಿಯ ಚಿಂತಕ ಕೆ.ಮಹಾಬಲ ಮರ್ವಂತೆ ಮತ್ತು ಚಿಂತಕರ ಚಾವಡಿಯ ಸಂಸ್ಥಾಪಕರಾದ ಎಸ್.ಎಸ್.ಭಟ್ ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

    ಇದೇ ಸಂದರ್ಭದಲ್ಲಿ ಟಿ.ಎಮ್.ಜಗದೀಶರ ‘ಜಗ ಜೀವನ’ ಕೃತಿ, ಕೆ.ಮಹೇಶರ ಕಥಾ ಸಂಕಲನ ‘ಇಳೆಯೊಳಗಿನ ಮೌನ’ ಹಾಗೂ ದಿವಸ್ಪತಿ ಭಟ್ ರ ‘ಅಂತರಾಳದಿಂದ’ ಮತ್ತು ಯಮುನಾ ಹೆಗಡೆಯವರ ‘ಶ್ರೀಶನಿಕಥಾ’ ಹಳೆ ಸಾಂಪ್ರದಾಯಿಕ ಹಾಡುಗಳ ಸಂಕಲನ ಮುಂತಾದ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಪ್ರಕಾಶ ಭಾಗ್ವತ. ಎಸ್.ಎಸ್.ಭಟ್, ಮಹೇಶ ಹನಕೆರೆ ಮತ್ತು ಪೂರ್ಣಿಮಾ ಹೆಗಡೆ ಇವರುಗಳು ಬಿಡುಗಡೆಗೊಂಡ ಪುಸ್ತಕಗಳ ಪರಿಚಯ ಮಾಡುವರು.
    ಭೋಜನ ವಿರಾಮದ ಬಳಿಕ ಶಿಶುಗೀತೆ, ಕವನವಾಚನ, ಗಾಯನಗೋಷ್ಠಿ ನಡೆಯಲಿದ್ದು ಪ್ರೊ.ಜಿ.ಎ.ಹೆಗಡೆ ಸೋಂದಾ ಅಧ್ಯಕ್ಷತೆ ವಹಿಸುವರು.

    300x250 AD

    ಉತ್ತಮ ಕವನಗಳಿಗೆ ಬಹುಮಾನಗಳಿದ್ದು, ನಿರ್ಣಾಯಕರಾಗಿ ಎಮ್.ಎಸ್. ಹೆಗಡೆ, ಡಿ. ಎಸ್. ಭಟ್ಟ ಉಪಸ್ಥಿತರಿರುವರು. ಹಿರಿಯ ಕವಯತ್ರಿ ನಿರ್ಮಲಾ ಹೆಗಡೆ ಮತ್ತು ಕವಿ ಡಿ.ಎಸ್.ಭಟ್ ರಿಗೆ ‘ಗೌರವ ಸಮರ್ಪಣೆ’ ಸಹ ಆಯೋಜಿಸಲಾಗಿದೆ.
    ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಅಚ್ಯುತ ರಾವ್ ವಹಿಸುವರು. ಶಿರಸಿ ತಾಲೂಕಾ ಕ.ಸಾ.ಪ ಅಧ್ಯಕ್ಷರಾದ ಸುಬ್ರಾಯ ಭಟ್ ಬಕ್ಕಳ, ಕವಿ ಮಹೇಶಕುಮಾರ ಹನಕೆರೆ ಉಪಸ್ಥಿತರಿರುವರು. ನಂತರ ನಡೆವ ಮನರಂಜನಾ ಕಾರ್ಯಕ್ರಮಗಳಲ್ಲಿ ನವೀನ ದೊಂಬೆಯವರಿಂದ ಹಾಸ್ಯ ಮತ್ತು ಮಿಮಿಕ್ರಿ, ವಿವೇಕಾನಂದ ನಗರ ತಂಡದವರಿಂದ ನೃತ್ಯ ಸಂಜೆ, ಹಾಗೂ ಶ್ರೀಮತಿ ದೀಪಾ ಹೆಗಡೆಯವರಿಂದ ನೃತ್ಯ ರೂಪಕ ಮತ್ತು ವಿದ್ವಾನ್ ಮಹಾಬಲೇಶ್ವರ ಹೆಗಡೆಯವರಿಂದ ಶಾಸ್ತ್ರೀಯ ಗಾಯನ ನಡೆಯಲಿದೆ, ಎಂದು ಸಂಘಟಕರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top