Slide
Slide
Slide
previous arrow
next arrow

ಶಿಶು ಪಾಲನಾ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನ

300x250 AD

ಕುಮಟಾ: ಪಟ್ಟಣದ ಹೈಟೆಕ್ ಸ್ಕ್ಯಾನಿಂಗ್ ಸೆಂಟರ್ ಬಳಿ ಸಹಕಾರಿ ಮಹಿಳಾ ಮಂಡಳವು ನಡೆಸುತ್ತಿರುವ ಶಿಶು ಪಾಲನಾ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಹಕಾರಿ ಮಹಿಳಾ ಮಂಡಳದ ಅಧ್ಯಕ್ಷೆ ಯಮುನಾ ಭಾಗ್ವತ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪುಟಾಣಿ ಮಕ್ಕಳಲ್ಲಿ ಕಲಿಕಾ ಜಾಗೃತಿ ಜತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಕಾರ್ಯವಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಹಕಾರಿ ಮಹಿಳಾ ಮಂಡಳದ ನಿರ್ದೇಶಕಿ ಭಾಗ್ಯಲಕ್ಷ್ಮಿ ಭಟ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಹಕಾರಿ ಮಹಿಳಾ ಮಂಡಳದ ಅಧ್ಯಕ್ಷೆ ಯಮುನಾ ಭಾಗ್ವತ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಮಕ್ಕಳು ಮತ್ತು ಪಾಲಕರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಕಾರಿ ಮಹಿಳಾ ಮಂಡಳದ ನಿರ್ದೇಶಕರಾದ ಲಲಿತಾ ಹೆಬ್ಬಾರ್, ಉಷಾ ಕುಂಭೇಶ್ವರ, ರಮಾ ಭಟ್, ಆಶಾ ಭಂಡಾರಿ, ಗೀತಾ ಭಂಡಾರಕರ್, ಸುರೇಖಾ ಹೆಗಡೆ, ರೇಷ್ಮಾ ಕಾಮತ್, ಕಾರ್ಯದರ್ಶಿ ನೀಲಾ ಕೋಡಿಯಾ, ಶಿಕ್ಷಕಿ ಮಂಗಲಾ ನಾಯ್ಕ, ಸಹಾಯಕಿ ದೀಪಾ ಭಂಡಾರಿ, ಪಾಲಕರು ಇದ್ದರು.  ಸಭಾ ಕಾರ್ಯಕ್ರಮದ ಬಳಿಕ ನಡೆದ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರನ್ನು ರಂಜಿಸಿತು.

300x250 AD
Share This
300x250 AD
300x250 AD
300x250 AD
Back to top