• Slide
  Slide
  Slide
  previous arrow
  next arrow
 • ಅರಣ್ಯವಾಸಿಯ ಅರ್ಜಿ ನಾಪತ್ತೆ: ಕಡತ ಹುಡುಕಲು ಫಿರ್ಯಾದಿ ದಾಖಲು

  300x250 AD

  ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಓರ್ವ ಅತಿಕ್ರಮಣದಾರಳ ಅರ್ಜಿ ನಾಪತ್ತೆ ಕುರಿತು ಪೋಲೀಸ್ ಠಾಣೆಯಲ್ಲಿ ಫೀರ್ಯಾದಿ ದಾಖಲಿಸಿ, ಅರ್ಜಿಯ ಕಡತ ಹುಡುಕಿಕೊಡಲು ಹಾಗೂ ಕರ್ತವ್ಯಚ್ಯುತಿವೆಸಗಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಂಬಂಧ ಅತಿಕ್ರಮಣದಾರರಿಂದ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಫೀರ್ಯಾದಿ ದಾಖಲಿಸಿದ ಘಟನೆಗಳು ಜರುಗಿದವು.

  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸಮಕ್ಷಮದಲ್ಲಿ ಹಾಗೂ ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳ ಜೊತೆಯಲ್ಲಿ ಹಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀಮತಿ ಮಾರ್ಗೆಟ್ ಕಾರ್ಲೂಯಿಸ್ ಫರ್ನಾಂಡಿಸ್ ನ್ಯಾಯ ಕೋರಿ ಠಾಣೆಗೆ ಆಗಮಿಸಿದ ಪಿಸಿಐ ಮಲ್ಲಿಕಾರ್ಜುನ ಕುರಾಣಿ ಅವರಿಗೆ ಲಿಖಿತ ಫಿರ್ಯಾದಿಯನ್ನು ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ನೀಡಿದರು.

   ಫೀರ್ಯಾದಾರಳು ಸಿದ್ದಾಪುರ ತಾಲೂಕ, ಕೋಡ್ಕಣಿ ಗ್ರಾಮ, ಫಾ.ಸ.ನಂ 8ರಲ್ಲಿ 0-5-0 ಕ್ಷೇತ್ರಕ್ಕೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 1950ರ ಪೂರ್ವದಿಂದಲೂ ಅತಿಕ್ರಮಿಸಿ, ಹಲಗೇರಿ ಗ್ರಾಮ ಪಂಚಾಯತ  ವಾಸ್ತವ್ಯದ ಮನೆ ನಂ: 167 ರಲ್ಲಿ ವಾಸ್ತವ್ಯ ಮಾಡಿಕೊಂಡು ಬಾಳೆ, ತೆಂಗು, ಹಣ್ಣು-ಹಂಪಲ ಬೆಳೆಸಿ ಸಾಗುವಳಿ ಮಾಡುತ್ತಾ ಅರಣ್ಯ ಭೂಮಿಯ ಮೇಲೆ ಅವಲಂಬಿತಳಾಗಿರುತ್ತೇನೆ. ಅಲ್ಲದೇ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿ ಜಿ.ಪಿ.ಎಸ್ ಸಹಿತ ಆಗಿದ್ದು, ಗ್ರಾಮ ಅರಣ್ಯ ಹಕ್ಕು ಸಮಿತಿಯಿಂದ ಅರ್ಜಿ ಮಂಜೂರಿಗೆ ಶಿಪಾರಸ್ಸು ಆಗಿದೆ ಎಂದು ಫೀರ್ಯಾದಿದಾರಳು ಉಲ್ಲೇಖಿಸಿದ್ದಾಳೆ.

  300x250 AD

   ಫಿರ್ಯಾದಿ ದಾಖಲಿಸುವ ಸಂದರ್ಭದಲ್ಲಿ ಹೋರಾಟಗಾರರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರೈತ ಮುಖಂಡರಾದ ವೀರಭದ್ರ ನಾಯ್ಕ, ರಾಘವೇಂದ್ರ ಕವಂಚೂರು, ಸುನೀಲ್ ನಾಯ್ಕ ಸಂಪಖಂಡ, ದಿನೇಶ್  ನಾಯ್ಕ ಬೇಡ್ಕಣಿ, ಸುರೇಶ್ ನಾಯ್ಕ, ಗೋವಿಂದ ಗೌಡ, ಗೋಪಾಲ ನಾಯ್ಕ, ಭಾಸ್ಕರ ನಾಯ್ಕ, ತೇಜು ನಾಯ್ಕ, ಕೃಷ್ಣ ಆರ್ ನಾಯ್ಕ, ವಿಜಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

  ಅರ್ಜಿ ನಾಪತ್ತೆ:
   ಅರಣ್ಯ ಹಕ್ಕು ಸಮಿತಿ ಅವರು ನೀಡಿದ ಎಲ್ಲಾ ಅರ್ಜಿಗಳು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿ ಲಿಖಿತ ಉತ್ತರ ನೀಡಿದರೇ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ಕಾರ್ಯಲಯವು ಫಿರ್ಯಾದಿದಾರಳ ಅರ್ಜಿ ಕಚೇರಿಗೆ ಸ್ವೀಕೃತಿಯಾದ ಕಡತದಲ್ಲಿ ಇರುವುದಿಲ್ಲ ಎಂದು ಉತ್ತರ ನೀಡಿದೆ. ಹಕ್ಕು ಮಾನ್ಯತೆ ಮಾಡುವ ದಿಶೆಯಲ್ಲಿ ಅರ್ಜಿಯನ್ನ ಹುಡುಕಿಕೊಟ್ಟು ನ್ಯಾಯ ಒದಗಿಸಿಕೊಡಬೇಕೆಂದು ಫೀರ್ಯಾದಿಯಲ್ಲಿ ಫೀರ್ಯಾದಿದಾರಳು ಉಲ್ಲೇಖಿಸಿದ್ದಾಳೆ.

  Share This
  300x250 AD
  300x250 AD
  300x250 AD
  Leaderboard Ad
  Back to top