Slide
Slide
Slide
previous arrow
next arrow

ತಬಲಾ ಜೂನಿಯರ್ ಪರೀಕ್ಷೆ: ಶಿರಸಿ ಅನೀಶ್ ಭಟ್ ಸಾಧನೆ

300x250 AD

ಶಿರಸಿ: ಇಲ್ಲಿನ ಆದರ್ಶ ನಗರದ ಬಾಲಕ ಅನೀಶ್ ಗುರುರಾಜ ಭಟ್ ಸುಬ್ರಾಯಕೊಡ್ಲು ಈತನು ಈ ಸಾಲಿನ ತಾಳವಾದ್ಯ ಪರೀಕ್ಷೆಯಲ್ಲಿ, ತಬಲಾ ವಾದನ ವಿಭಾಗದ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಗ್ಶನ್ ಸಾಧನೆ ತೋರಿದ್ದಾನೆ. ಈತನು ಶಿರಸಿಯ ಅರುಣೋದಯ ಕಲಾನಿಕೇತನ ಸಂಗೀತ ವಿದ್ಯಾಲಯದಲ್ಲಿ ಹಿರಿಯ ತಬಲಾ ವಾದಕ ಸಂಜೀವ ಪೋತದಾರ ಅವರಲ್ಲಿ ತಬಲಾ ವಾದನದ ತರಬೇತಿ ಪಡೆಯುತ್ತಿದ್ದಾನೆ.

ಚಂದನ ಶಾಲೆಯ ಏಳನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಅನೀಶ್ ಈಗಾಗಲೇ ಶಾಲಾಮಟ್ಟದ ಹಲವಾರು ಕಾರ್ಯಕ್ರಮಗಳು ಸೇರಿದಂತೆ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದು, ಬಾಲಕನ ಸಾಧನೆಗೆ ಸಂಗೀತ ಗುರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top