• Slide
    Slide
    Slide
    previous arrow
    next arrow
  • ಹುಲೇಕಲ್‌ನಲ್ಲಿ ಪ್ರಗತಿಪರ ರೈತ ಸಂಘ ಉದ್ಘಾಟನೆ

    300x250 AD

    ಶಿರಸಿ : ರೈತರು ಜಾಗೃತರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಣೆ ಮಾಡುವತ್ತ ಸಂಕಲ್ಪ ಮಾಡಿ ಕಾರ್ಯೋನ್ಮುಖರಾದರೆ ಕೃಷಿಯಲ್ಲಿ ಯಶಸ್ಸು ಸಾಧ್ಯ. ಕೃಷಿಯ ಬಗ್ಗೆ ಕೀಳರಿಮೆ ಬೇಡ. ರೈತ ಬೆಳೆದ ಬೆಳೆಗೆ ಯೋಗ್ಯ ಧಾರಣೆ ಇಂಥ ಸಂಘಗಳಿಂದ ದೊರೆಯುವಂತಾಗಬೇಕು ಎಂದು ಹಿರಿಯ ಪತ್ರಕರ್ತ, ಸಾಹಿತಿ ಜಿ.ಸುಬ್ರಾಯ ಭಟ್ ಬಕ್ಕಳ ಅಭಿಪ್ರಾಯಪಟ್ಟರು.

    ಅವರು ಹುಲೇಕಲ್ಲಿನಲ್ಲಿ ನೂತನವಾಗಿ ಆರಂಭಿಸಲಾದ ಪ್ರಗತಿಪರ ರೈತ ಸಂಘ ಕರ್ನಾಟಕ (ರಿ.)ಕ್ಕೆ ಚಾಲನೆ ನೀಡಿ ಮಾತನಾಡಿ ಕೃಷಿ, ಶ್ರೀಸಾಮಾನ್ಯ ರೈತಪರ ಅಪಾರ ಕಾಳಜಿ ಆಶೋತ್ತರಗಳನ್ನು ಹೊಂದಿರುವ ಈ ಸಂಸ್ಥೆಯನ್ನು ಬೆಳೆಸಿ ಬಲಪಡಿಸುವ ಮೂಲಕ ರೈತ ಸಮುದಾಯ ಹೆಚ್ಚಿನ ಪ್ರಯೋಜನ ಸವಲತ್ತುಗಳನ್ನು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು.
    ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡಿದ್ದ ಉಪನ್ಯಾಸಕ ಪ್ರಗತಿಪರ ಕೃಷಿಕ ರಾಮು ಕಿಣಿ ಮಾತನಾಡಿ ಬೆಳೆಗಳ ಸಂಸ್ಕರಣೆ ಮೌಲ್ಯವರ್ಧನೆ ಕುರಿತಂತೆ ರೈತ ಸಮುದಾಯ ಸಮುದಾಯಿಕವಾಗಿ ಪ್ರಯತ್ನಿಸಿದರೆ ಯಶಸ್ಸು ಸಾಧ್ಯ ಎಂದರು.
    ಇದೇ ಸಂದರ್ಭದಲ್ಲಿ ರಾಮು ಕಿಣಿ ತಮ್ಮ ಶಿಷ್ಯ ಪ್ರಗತಿ ಪರ ರೈತ ಸಂಘ ಕರ್ನಾಟಕದ ರಾಜ್ಯಾಧ್ಯಕ್ಷ ಲಕ್ಷ್ಮಣ ಜಿ. ನಾಯ್ಕ ಸಿದ್ದಾಪುರ ಇವರಿಗೆ ಶಾಲು ಹೊದೆಸಿ ಸ್ಮರಣಿಕೆಗಳನಿತ್ತು ಸನ್ಮಾನಿಸಿ ಶುಭ ಹಾರೈಸಿದರು.
    ಕಾಳು ಮೆಣಸಿನ ಬೇಸಾಯ ಸಮಗ್ರ ನಿರ್ವಹಣೆ ಕುರಿತಂತೆ ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಪ್ರಸಾದ್ ಪಿ.ಎಸ್ ರೈತರಿಗೆ ಪೂರಕವಾದ ಸಮಗ್ರ ಮಾಹಿತಿ ನೀಡಿದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಪರ ರೈತ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ಲಕ್ಷ್ಮಣ.ಜಿ.ನಾಯ್ಕ ಸಿದ್ದಾಪುರ ವಹಿಸಿದ್ದರು.
    ಸಂಸ್ಥೆಯ ನಿರ್ದೇಶಕ ವೆಂಕಟೇಶ ಭಟ್ ಸಂಸ್ಥೆಯ ಧ್ಯೇಯೋದ್ದೇಶಗಳು ಆಶೋತ್ತರಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಗೋಕೃಪಾಮೃತಮ್ ಭೂ ಸಮೃದ್ಧಿ ಸಸ್ಯ ಸಂಜೀವಿನಿ ದ್ರವ್ಯ ತಯಾರಿಕೆ ಕುರಿತಂತೆ ಪ್ರಾತ್ಯಕ್ಷಿಕೆಯೊಂದಿಗೆ ರಾಘವೇಂದ್ರ ಹೆಗಡೆ ಹೊನ್ನೆಗದ್ದೆ ಸಮಗ್ರ ವಿವರಣೆಯೊಂದಿಗೆ ಮಾಹಿತಿ ನೀಡಿದರು. ಇದೆ ಸಂದರ್ಭದಲ್ಲಿ ಭಾಗವಹಿಸಿದ ನೂರಾರು ರೈತರಿಗೆ ಗೋಕೃಪಾಮೃತಮ್ ಉಚಿತ ವಿತರಣೆ ಮಾಡಲಾಯಿತು.
    ಪ್ರಗತಿ ಪರ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಭಟ್, ಸಂಘಟನೆಯ ನಿರ್ದೇಶಕರಾದ ವೆಂಕಟರಮಣ ಭಟ್, ಸಾವಿತ್ರಿ ಆರ್ ಹೆಗಡೆ, ನಾಗರಾಜ್ ಶುಂಠಿ, ಸಂತೋಷ್ ಭಟ್, ಸತೀಶ ಮಡಿವಾಳ, ರಮೇಶ್ ಮುರಾರಿ, ಹುಲೇಕಲ್ ಗ್ರಾ.ಪಂ. ಸದಸ್ಯ ಖಾಸೀಂ ಸಾಬ್ ಮುಂತಾದವರು ಉಪಸ್ಥಿತರಿದ್ದರು. ಪದ್ಮನಾಭ ಆರೇಕಟ್ಟ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ ಭಟ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top