• Slide
  Slide
  Slide
  previous arrow
  next arrow
 • ಬಾಲಕ ನಾಪತ್ತೆ; ಮಾಹಿತಿ ನೀಡಲು ಸೂಚನೆ

  300x250 AD

  ಕಾರವಾರ: ನಗರದ ಹಳೆ ಸಿವಿಲ್ ಆಸ್ಪತ್ರೆ ಸಮೀಪದ ನಿವಾಸಿ, 15 ವರ್ಷ ವಯಸ್ಸಿನ ಸುಲೋಕ ಚಂಡೇಕರ್ ಎನ್ನುವಾತ ಕಾಣೆಯಾಗಿದ್ದು, ಈತನ ಮಾಹಿತಿ ದೊರೆತಲ್ಲಿ ನಗರ ಠಾಣೆಗೆ ನೀಡಲು ಕೋರಿದೆ.

  ಕಾಣೆಯಾಗಿರುವ ಬಾಲಕನ ತಂದೆ, ನಿವೃತ್ತ ಸೈನಿಕ ಸುಭಾಷ ಚಂಡೇಕರ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾ.18ರಂದು ಸಂಜೆ 5.45ರ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ. ಆತ ಅಪ್ರಾಪ್ತ ವಯಸ್ಸಿನವನಾಗಿರುವುದರಿಂದ ಯಾರಾದರೂ ಪುಸಲಾಯಿಸಿ ಎಲ್ಲಿಗಾದರೂ ಕರೆದುಕೊಂಡು ಹೋಗಿರಬಹುದಾದ ಸಾಧ್ಯತೆ ಇದ್ದು, ಸ್ಥಳೀಯವಾಗಿ ಹುಡುಕಾಡಿ ಮತ್ತು ಸಂಬಂಧಿಕರಲ್ಲಿ ವಿಚಾಸಿದರೂ ಈವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಕಾಣೆಯಾದ ಮಗನನ್ನು ಹುಡುಕಿಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

  300x250 AD

  ಬಾಲಕನ ಎತ್ತರ 175 ಸೆಂ.ಮೀ. ಇದ್ದು, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಉದ್ದನೆಯ ಮುಖದ ಬಿಳಿ ಬಣ್ಣದ ಈತ, ಮನೆಯಿಂದ ಹೋಗುವಾಗ ಸಿಮೆಂಟ್ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದ. ಕನ್ನಡ, ಕೊಂಕಣಿ, ಇಂಗ್ಲೀಷ್, ಹಿಂದಿ ಬಾಷೆಯನ್ನು ಮಾತಾಡುವ ಈ ಬಾಲಕನ ಕುರಿತು ಮಾಹಿತಿ ದೊರೆತಲ್ಲಿ ಕಾರವಾರ ನಗರ ಪೊಲೀಸ್ ಠಾಣೆಯ ನಿರೀಕ್ಷಕರು (Tel:+919480805230, Tel:+9108382226333), ಉಪ ನಿರೀಕ್ಷಕರು (tel:+919480805245) ಅಥವಾ ಕಂಟ್ರೋಲ್ ರೂಮ್: tel:+9108382226550 ಗೆ ಸಂಪರ್ಕಿಸಲು ಕೋರಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top