Slide
Slide
Slide
previous arrow
next arrow

ಮೂಲಸೌಕರ್ಯ ಕೊರತೆ: ರಸ್ತೆ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ

300x250 AD

ಭಟ್ಕಳ: ಇಲ್ಲಿನ ನಗರ ಪ್ರದೇಶದ ಜಂಬರ್ ಮಠಕ್ಕೆ ಸಾಗುವ ಮಾರ್ಗದ ವಾರ್ಡ್ ನಂಬರ್ 10 ಮತ್ತು 11ರ ರಸ್ತೆ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಪಡೆಯಲು ನಾಗರಿಕರು ಹರಸಾಹಸ ಪಡೆಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ರಸ್ತೆಯ ಮಧ್ಯ ಗಿಡ ನೆಟ್ಟು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಇಲ್ಲಿನ ಸ್ಥಳೀಯ ನಿವಾಸಿಗಳು ಎಷ್ಟೇ ಬಾರಿ ಈ ಬಗ್ಗೆ ಮನವಿಯನ್ನು ನೀಡಿದರು ಪುರಸಭೆ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಲವಾರು ಬಾರಿ ಸ್ಥಳೀಯಾಡಳಿತ ಹಾಗೂ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ಇಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ಶುಕ್ರವಾರದಂದು ಈ ಅವ್ಯವಸ್ಥೆಯಿಂದ ಬೇಸತ್ತು ರಸ್ತೆಯಲ್ಲಿರುವ ಹೊಂಡಗಳಲ್ಲಿ ಗಿಡಗಳನ್ನು ನೆಟ್ಟು ಸಾಂಕೇತಿಕವಾಗಿ ಸ್ಥಳೀಯರು ಪ್ರತಿಭಟಿಸಿದರು.
ಈ ಬಗ್ಗೆ ಮಾತನಾಡಿದ ಸ್ಥಳಿಯ ಸಚಿನ್ ಮಹಾಲೆ, ಜನರು ನಿತ್ಯ ಸಂಚಾರಕ್ಕೆ ಅನೂಕೂಲ ಕಲ್ಪಿಸುವ ರಸ್ತೆಯು ಕಳೆದ 5- 6 ವರ್ಷಗಳಿಂದ ಹಾಳಾಗಿದೆ. ಈ ಬಗ್ಗೆ ನಗರೋತ್ಥಾನ ಯೋಜನೆಯಡಿ ಕಳೆದ 2 ತಿಂಗಳ ಹಿಂದೆ ಭೂಮಿ ಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕುಂದಾಪುರ ಮೂಲದ  ಗುತ್ತಿಗೆದಾರು ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಆರಂಭಿಸಲು ಮೀನಾಮೇಷ ಎಣಿಸುತ್ತಿದ್ದು, ಈ ಬಗ್ಗೆ ಪುರಸಭೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ ಈ ಬಗ್ಗೆ ಪುರಸಭೆ ನೋಟಿಸ್ ನೀಡಿದ್ದರು ಕಾಮಗಾರಿ ಆರಂಭಿಸಿಲ್ಲ. ಸ್ಥಳೀಯರು ಗುತ್ತಿಗೆದಾರನನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಗುತ್ತಿಗೆದಾರನಿಂದ ಯಾವುದೇ ರೀತಿಯ ಸಮರ್ಪಕವಾದಂತಹ ಉತ್ತರ ದೊರೆಯದಾಗಿದೆ ಎಂದರು.
ಈ ಕಳೆದ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಬ್ಬಿಣದ ಸರಳುಗಳು ರಸ್ತೆಯಲ್ಲಿ ಎದ್ದು ನಿಂತಿದೆ. ಇದರಿಂದ ವಾಹನ ಸವಾರರು ವಾಹನಗಳನ್ನು ಚಲಾಯಿಸುವುದು ಕಷ್ಟವಾಗಿದೆ. ಅಲ್ಲದೇ ನೀರಿನ ಬಾವಿಗಳು ಅವೈಜ್ಣಾನಿಕವಾಗಿ ನಿರ್ಮಾಣಗೊಂಡ ಯುಜಿಡಿ ಅಂಡರ್ ಗ್ರೌಂಡ್ ಡ್ರ‍್ಯಾನೇಜ್ ಕಾಮಗಾರಿಯಿಂದಾಗಿ ಈ ಭಾಗದ ಹಲವು ಮನೆಗಳು ನೀರಿನ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ರಥೋತ್ಸವದ ಸಮಯದಲ್ಲಿ ದೇವರ ಪಲ್ಲಕ್ಕಿ ಉತ್ಸವವು ಈ ಮಾರ್ಗದಿಂದಲೇ ಸಂಚರಿಸುವುದಿದ್ದು, ಈ ಬಗ್ಗೆ ಪುರಸಭೆಯಾದರೂ ಗಮನಹರಿಸಿ ಶೀಘ್ರವಾಗಿ ಕಾಮಗಾರಿಯನ್ನು ನಡೆಸಿ ನಾಗರಿಕರಿಗೆ ಮೂಲಸೌಕರ್ಯಗಳನ್ನು ಆದಷ್ಟು ಶೀಘ್ರದಲ್ಲಿ ಒದಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳವರೆಗೂ ಈ ಬಗ್ಗೆ ಮಾಹಿತಿ ಸಲ್ಲಿಸಲಾಗಿದ್ದರೂ ಸಹ ಇಲ್ಲಿಯ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇಂದು ಸಾಂಕೇತಿಕವಾಗಿ ಹೋರಾಟ ಮಾಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ನಡೆಸುವ ಬಗ್ಗೆ ಎಚ್ಚರಿಕೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಸ್ಥಳೀಯರಾದ ವಿನಾಯಕ್ ಶೇಟ್, ಶ್ರೀಕಾಂತ ಮೋಗೇರ, ಅಮಿತ ಮಹಾಲೆ, ವಿಶ್ವನಾಥ ಶೇಟ್ ಸೇರಿದಂತೆ ನೂರಾರು ಮಂದಿ ಇದ್ದರು.

300x250 AD
Share This
300x250 AD
300x250 AD
300x250 AD
Back to top