Slide
Slide
Slide
previous arrow
next arrow

ಜಿಲ್ಲಾಮಟ್ಟದ ಆರ್.ಪಿ.ಐ.ಕಾರ್ಯಕರ್ತರ ಜಾಗೃತಿ ಸಮಾವೇಶ ಯಶಸ್ವಿ

300x250 AD

ಶಿರಸಿ : ನಗರದ ಅಂಬೇಡ್ಕರ್ ಭವನದಲ್ಲಿ ಮಾ ೨೩ರಂದು ನಡೆದ ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದ ಸಮಾವೇಶದಲ್ಲಿ ಕಾರ್ಯಕರ್ತರ ಜಾಗೃತಿ ಸಮಾವೇಶವು ರಾಜ್ಯ ಕಮಿಟಿಯ ಎಲ್ಲಾ ಪಧಾಧಿಕಾರಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಮತ್ತು ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವುದರ ಮೂಲಕ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆರ್.ಪಿ.ಐ.ರಾಜಾಧ್ಯಕ್ಷ ಡಾ. ಎಮ್. ವೆಂಕಟಸ್ವಾಮಿ ಆಗಮಿಸಿದ್ದರು. ಆರ್.ಪಿ.ಐ. ರಾಜ್ಯ ಉಪಾಧ್ಯಕ್ಷ ಚಿದಾನಂದ ಹ. ಹರಿಜನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೆ ಸಂದರ್ಭದಲ್ಲಿ ಶಿರಸಿ ಮತ್ತು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಆರ್.ಪಿ.ಐ.ಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಇನ್ನುಳಿದ ವಿಧಾನಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಕೂಡಲೇ ಆಯ್ಕೆ ಮಾಡಲಾಗುವುದು ಎಂದು ರಾಷ್ಟೀಯ ಕಾರ್ಯದರ್ಶಿಗಳಾದ ಎಂ.ವೆಂಕಟಸ್ವಾಮಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದಾದ ಬಳಿಕ ಕರ್ನಾಟಕ ರಾಜ್ಯ ಮುನ್ಸಿಪಾಲ್ ಕಾರ್ಮಿಕರ ಸಂಘ (ರಿ) ರವರು ನಗರದಲ್ಲಿ ನಡೆಸುತ್ತಿರುವ ನಾಲ್ಕನೇಯ ದಿನದ ಮುನ್ಸಿಪಲ್ ಕಾರ್ಮಿಕರ ಖಾಯಂಮಾತಿ ಮತ್ತು ಖಾಯಂಗೊಳಿಸಲು ಹೋರಾಟಕ್ಕೆ ಭೇಟಿ ನೀಡಿ, ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಶಿರಸಿ ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ಉಪಾಧ್ಯಕ್ಷರ ಸಮ್ಮುಖದಲ್ಲಿ ಶ್ರೀಮತಿ ರೇಣುಕಾ ದೇಶಭಾಗ್ ಇವರನ್ನು ಶಿರಸಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರನ್ನಾಗಿ, ಅರ್ಜನ್ ಮೀಂಟಿಯವರನ್ನು ಶಿರಸಿ ತಾಲ್ಲೂಕ ಅಧ್ಯಕ್ಷರನ್ನಾಗಿ, ಮತ್ತು ಶಂಕರ್ ಎಮ್.ಸಾಗರಕರ್’ನ್ನು ಉತ್ತರಕನ್ನಡ ಜಿಲ್ಲಾ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಲಾಗಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್.ಪಿ.ಐ. ಬಿಜಾಪುರ ಜಿಲ್ಲಾಧ್ಯಕ್ಷ ಶಾಸ್ತ್ರೀ ಹೊಸಮನಿ, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಬೆಳಗಾವಿ ಶ್ರೀಮತಿ ದಿಲಶಾದ ಎಸ್. ತಾಹಶಿಲ್ದಾರ, ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ಹಸಿನಾ ಶೇಖ, ಆರ್.ಪಿ.ಐ. ಧಾರವಾಡ ಶ್ರೀನಿವಾಸ ವೇಮು, ಇವರುಗಳು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು.

300x250 AD
Share This
300x250 AD
300x250 AD
300x250 AD
Back to top