Slide
Slide
Slide
previous arrow
next arrow

ಹೆಚ್ಚೆಚ್ಚು ಹಾಲಿನ ಶೇಖರಣೆ ಮಾಡಿದ್ದಲ್ಲಿ ಸಂಘದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ಸುರೇಶ್ಚಂದ್ರ ಹೆಗಡೆ

300x250 AD

ಶಿರಸಿ: ತಾಲೂಕಿನ ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘ ನಿ., ತಾರಗೋಡಿನ ಹಾಲು ಶೇಖರಣೆಯನ್ನು ಮಾಡುವ ಉಪಕೇಂದ್ರವಾದ ಸದಾಶಿವಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆಯನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಒಟ್ಟೂ 47 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿದ್ದು, ಜಿಲ್ಲೆಯಾದ್ಯಂತ ಉಳಿದ ಎಲ್ಲಾ ಹಾಲು ಸಂಘಗಳಿಗೆ ಜನಪ್ರತಿನಿಧಿಗಳ ಸಹಾಯ ಸಹಕಾರದಿಂದ ಸ್ವಂತ ಕಟ್ಟಡ ಹೊಂದುವಂತೆ ಯೋಜನೆ ರೂಪಿಸಲಾಗಿದೆ ಎಂದರು. ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೇಖರಣೆಯನ್ನು ಮಾಡುವ ಉಪಕೇಂದ್ರವಾದ ಸದಾಶಿವಳ್ಳಿ ಗ್ರಾಮದಲ್ಲಿ ಉಪಕೇಂದ್ರ ಪ್ರಾರಂಭವಾದ ದಿನಗಳಲ್ಲಿ ದಿನಕ್ಕೆ 50 ಲೀಟರ್‌ನಷ್ಟು ಹಾಲು ಶೇಖರಣೆಯಾಗುತ್ತಿತ್ತು ಆದರೆ ಇಂದು ಪ್ರತೀ ದಿನಕ್ಕೆ 150 ಲೀಟರ್‌ನಷ್ಟು ಹಾಲು ಶೇಖರಣೆಯಾಗುತ್ತಿದ್ದು ತುಂಬಾ ಖುಷಿಯ ಸಂಗತಿ ಆಗಿದ್ದು ಹಾಲು ಸಂಘವು ಅತೀ ಹೆಚ್ಚು ಉತ್ತಮ ಗುಣಮಟ್ಟದ ಹಾಲು ಶೇಖರಣೆ ಮಾಡಿದ್ದಲ್ಲಿ ತಮ್ಮ ಸಂಘದ ಹಾಗೂ ಆ ಭಾಗದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕ ಎಂಬುದಕ್ಕೆ ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಅದರ ಹಾಲು ಶೇಖರಣೆ ಕೇಂದ್ರವಾದ ಸದಾಶಿವಳ್ಳಿ ಒಂದು ಉತ್ತಮ ಉದಾಹರಣೆ ಆಗಿದ್ದು ತಾಲೂಕಿಗೆ ಒಂದು ಮಾದರಿ ಸಂಘವಾಗಿದೆ. ಇದಕ್ಕೆ ಕಾರಣ ಸಂಘದ ಉತ್ತಮ ಆಡಳಿತ ಹಾಗೂ ಈ ಭಾಗದ ರೈತರ ಅಪಾರ ಆಸಕ್ತಿ ಎಂದರು. ಸದ್ಯ ನಮಗೆ ಮಾರುಕಟ್ಟೆಯಲ್ಲಿರುವ ಹಾಲಿನ ಬೇಡಿಕೆ ಅಧಿಕವಾಗಿರುವುದರಿಂದ ತಮ್ಮ ಹಾಲಿನ ಶೇಖರಣೆಯನ್ನು ಪ್ರತೀ ದಿನಕ್ಕೆ ಈಗಿರುವ 150 ಲೀಟರ್‌ನಿಂದ 250 ಲೀಟರ್‌ಗೆ ಹೆಚ್ಚಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ರೈತರಲ್ಲಿ ಹೈನುಗಾರಿಕೆಯ ಮಹತ್ವದ ಬಗ್ಗೆ ಹಾಗೂ ರೈತರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಸುಬಿನಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವಲ್ಲಿ ಹಾಲು ಸಂಘಗಳು ಪಾತ್ರವಹಿಸಬೇಕಿದೆ ಎಂದರು. ಒಕ್ಕೂಟದಿಂದ ಉಪಕೇಂದ್ರದ ನೂತನ ಕಟ್ಟಡಕ್ಕೆ ರೂ. 50,000/- ಗಳ ಅನುದಾನವನ್ನು ಅತೀ ಶೀಘ್ರದಲ್ಲಿ ಮಂಜೂರಿ ಮಾಡುವುದಾಗಿ ಹಾಗೂ ಶುದ್ಧ ನೀರಿನ ಟ್ಯಾಂಕಿನ ಸೌಕರ್ಯವನ್ನು ಒದಗಿಸಿಕೊಡುವುದಾಗಿ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನಾರಾಯಣ ವೆಂಕಟರಮಣ ಹೆಗಡೆ , ಸದಾಶಿವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರಾಜ ಶ್ರೀಧರ ಹೆಗಡೆ, ಸದಸ್ಯಾದ ಗಣಪತಿ ಹೆಗಡೆ, ಸದಾಶಿವಳ್ಳಿ ದೇವಸ್ಥಾನದ ಅಧ್ಯಕ್ಷರಾದ ರಘುಪತಿ ಶಿವರಾಮ ಭಟ್‌, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶ ಗೌಡ, ಕದಂಬ ಮಾರ್ಕೆಂಟಿಂಗ್‌ ನ ಅಧ್ಯಕ್ಷರಾದ ಶಂಭುಲಿಂಗ ಗಣಪತಿ ಹೆಗಡೆ, ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಗುರುಪಾದ ಹೆಗಡೆ, ಸಂಘದ ಆಡಳಿತ ಮಂಡಳಿಯ ಸದಸ್ಯರು, ಧಾರವಾಡ ಸಹಕಾರ ಹಾಲು ಒಕ್ಕೂಟದ ವಿಸ್ತರಣಾ ಸಮಾಲೋಚಕ ಜಯಂತ ಪಟಗಾರ, ಹಾಲು ಉತ್ಪಾದಕರು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು. ಗಣಪತಿ ವೆಂಕಟರಮಣ ಹೆಗಡೆ ನಿರೂಪಿಸಿದರೆ, ಉದಯ ನಾರಾಯಣ ಹೆಗಡೆ ವಂದಿಸಿದರು.

Share This
300x250 AD
300x250 AD
300x250 AD
Back to top