• Slide
    Slide
    Slide
    previous arrow
    next arrow
  • ಮುಂಡಗೋಡಿನಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಶಕ್ತಿ ಪ್ರದರ್ಶನ

    300x250 AD

    ಮುಂಡಗೋಡ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಯಲ್ಲಾಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ರಂಗೇರಿದೆ. ಕ್ಷೇತ್ರದ ಮುಂಡಗೋಡಿನಲ್ಲಿ ಬೃಹತ್ ರ‍್ಯಾಲಿಯನ್ನು ಮಾಡುವ ಮೂಲಕ ಸಚಿವ ಶಿವರಾಮ್ ಹೆಬ್ಬಾರ್ ಶಕ್ತಿ ಪ್ರದರ್ಶನ ತೋರಿದ್ದಾರೆ.

    ಮುಂಡಗೋಡಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನಲೆಯಲ್ಲಿ ಬೃಹತ್ ರ‍್ಯಾಲಿಯನ್ನು ಆಯೋಜನೆ ಮಾಡಲಾಗಿತ್ತು. ಸುಮಾರು 5 ಸಾವಿರಕ್ಕೂ ಅಧಿಕ ಜನರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು ಸುಮಾರು 4 ಕಿಲೋ ಮೀಟರ್ ಗಟ್ಟಲೇ ರ‍್ಯಾಲಿ ಸಾಗುವ ಮೂಲಕ ಕ್ಷೇತ್ರದ ಇತಿಹಾಸದಲ್ಲಿಯೇ ದೊಡ್ಡ ರ‍್ಯಾಲಿ ಎಂದು ಕರೆಸಿಕೊಂಡಿತ್ತು. ಇದಾದ ನಂತರ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 25 ವರ್ಷ ಕ್ಷೇತ್ರದ ಆಡಳಿತ ನಡೆಸಿದ ಕಾಂಗ್ರೆಸ್‌ನವರು ಮುಂಡಗೋಡಗೆ ಏನು ಕೊಡುಗೆ ಕೊಟ್ಟಿದ್ದಾರೆ ಮುಂಡಗೋಡ-ಯಲ್ಲಾಪುರ ರಸ್ತೆ ಅಗಲಿಕರಣ ಮಾಡಲು ನಾವು ಬರಬೇಕಾಯಿತು. ಕೇವಲ ತುಷ್ಠಿಕರಣದ ರಾಜಕಾರಣ ಮಾಡುತ್ತಾ ಕ್ಷೇತ್ರದ ಅಭಿವೃದ್ದಿ ಮಾಡೇ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹೆಬ್ಬಾರ್ ಕಿಡಿಕಾರಿದರು.

    ಮುಂದೆ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ದ. ನನ್ನ ಕ್ಷೇತ್ರದ ಮತದಾರರು ನನಗೆ ಉಪಚುನಾವಣೆಯಲ್ಲಿ 34 ಸಾವಿರ ಮತಗಳ ಅಂತರದಿಂದ ಆರಿಸಿ ಕಳಿಸಿದ್ದಿರಿ, ಈಗಲೂ ಸಹ ಅದೆ ದಾಟಿಯಲ್ಲಿ ಮತಹಾಕಿ ಬಹುಮತದಿಂದ ತಮ್ಮ ಆರಿಸಿಕಳಿಸಿ ನಿಮ್ಮ ಸೇವೆಮಾಡಲು ಈ ಸೇವಕ ಸದಾ ಸಿದ್ದ ಎಂದರು.

    300x250 AD

    ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ ಸಮಾವೇಶದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಯಾವ ತಾಲೂಕಿನಲ್ಲಿಯೂ 15-20 ಸಾವಿರ ಕಾರ್ಯಕರ್ತರು ಭಾಗವಹಿಸಿದ್ದು ಕಂಡಿರಲಿಲ್ಲ. ಇಷ್ಟೊಂದು ಕಾರ್ಯಕರ್ತರು ಭಾಗವಹಿಸಿದ್ದು  ನೋಡುತ್ತಿರುವುದು ಮುಂಡಗೋಡ ತಾಲೂಕಿನಲ್ಲಿ ಕಾರ್ಯಕರ್ತರನ್ನು ಕಂಡು ಬಹಳ ಸಂತೋಷವಾಗಿದೆ. ಇದು ವಿಜಯ ಸಂಕಲ್ಪದ ಕಾರ್ಯಕ್ರಮವಲ್ಲ ಇದು ವಿಜಯೋತ್ಸವ ಕಾರ್ಯಕ್ರಮ ಎಂದರು.

    ನರೇಂದ್ರ ಮೋದಿಯವರು 8 ವರ್ಷಗಳಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟಿದರು. ಅವರು ಪ್ರಪಂಚದ ಅತ್ಯಂತ ಬಲಿಷ್ಠ ನಾಯಕ ಹಾಗೂ ಅತ್ಯಂತ ಜನಪ್ರೀಯ ನಾಯಕರಲ್ಲಿ ಮೊದಲಿನ ಸ್ಥಾನದಲ್ಲಿರುತ್ತಾರೆ.  ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಆರ್ಥಿಕ ಪ್ರಗತಿಯಲ್ಲಿ 16 ಸ್ಥಾನದಲ್ಲಿದ್ದ ನಾವು ಪ್ರಸ್ತುತ 6 ನೇ ಸ್ಥಾನಕ್ಕೆ ಬಂದಿದ್ದೇವೆ ಎಂದರು. ಶಿವರಾಮ ಹೆಬ್ಬಾರ ಕಾರ್ಮಿಕ ಸಚಿವ ಸ್ಥಾನ ಪಡೆದು ಕಾರ್ಮಿಕ ಇಲಾಖೆಯಲ್ಲಿದ್ದು ಕಾರ್ಮಿಕರಿಗೆ ನ್ಯಾಯ ಒದಗಿಸಿ ಕಾರ್ಮಿಕ ಇಲಾಖೆ ಹೆಸರು ತಂದುಕೊಟ್ಟು ರಾಷ್ಟ್ರ ಮಟ್ಟದಲ್ಲಿ ಉತ್ತಮ ಕಾರ್ಮಿಕ ಸಚಿವರೆಂದು ಹೆಸರು ಪಡೆದಿದ್ದಾರೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top