ಸಿದ್ದಾಪುರ: ಸ್ಥಳೀಯ ಲಯನ್ಸ್ ಕ್ಲಬ್‌ಗೆ ತಮ್ಮ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್, ಲಯನ್ ಸುಗ್ಗುಳಾ ಎಲಮಲಿ ಗದಗರವರು ಭೇಟಿ ನೀಡಿ ಕ್ಲಬ್ಬಿನ ಚಟುವಟಿಕೆಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಲಯನ್ಸ್ ಸಂಸ್ಥೆಯವರು ಕಣ್ಣಿನ ಆರೋಗ್ಯದ ಕುರಿತು, ರಕ್ತದಾನದ ಕುರಿತು ಹೆಚ್ಚು ಅರಿವನ್ನು ಮೂಡಿಸುವುದು ತುರ್ತು ಅಗತ್ಯದ ಕಾರ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಎಂದರು.
ಸ್ಥಳೀಯ ಬಾಲಿಕೊಪ್ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ಲಯನ್ಸ್ ಕ್ಲಬ್‌ರವರು ನೀಡಿದ ‘ಅತ್ಯುತ್ತಮ ಶಾಲಾ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಮುಖ್ಯಶಿಕ್ಷಕಿ ಸುಜಾತಾ ಶಾನಭಾಗ ಪ್ರಶಸ್ತಿ ಸ್ವೀಕರಿಸಿದರು.
ಅತಿಥಿಯಾಗಿ ಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆರವರು ಮಾತನಾಡಿ ಲಯನ್ಸ್ ಕ್ಲಬಿನ ವಿಶೇಷ ಶ್ರಮವನ್ನು ಅಂಧಮಕ್ಕಳ ಶಿಕ್ಷಣಕ್ಕೆ ತೊಡಗಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ಸದಸ್ಯತ್ವ ಹೊಂದಿ 35 ವರುಷವಾದ ಕುರಿತು ಜಿ.ಜಿ ಹೆಗಡೆ ಬಾಳಗೋಡ, 25 ವರುಷವಾದ ಕುರಿತು ನಾಗರಾಜ ಎಂ. ದೋಶೆಟ್ಟಿ ಅವರಿಗೆ ಅಂತಾರಾಷ್ಟೀಯ ಕಾರ್ಯಾಲಯದಿಂದ ಬಂದ ವಿಶೇಷ ಪ್ರಶಂಸಾಪತ್ರ ಮತ್ತು ಲಾಂಛನವನ್ನು ನೀಡಲಾಯಿತು.
ಪ್ರಾದೇಶಿಕ ಅಧ್ಯಕ್ಷೆ ಜ್ಯೋತಿ ಭಟ್ಟ ಶಿರಸಿರವರು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಸ್ಥಳೀಯ ಲಯನ್ಸ್ ಅಧ್ಯಕ್ಷ ಆರ್.ಎಂ. ಪಾಟೀಲ ಸ್ವಾಗತಿಸಿದರು. ನಾಗರಾಜ ದೋಶೆಟ್ಟಿ ಧ್ವಜವಂದನೆ ನೆರವೇರಿಸಿದರು. ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು ವರದಿ ವಾಚನಗೈದರು. ಶ್ಯಾಮಲಾ ಹೆಗಡೆ ಹೂವಿನಮನೆ ಅತಿಥಿಗಳನ್ನು ಪರಿಚಯಿಸಿದರು. ಕುಮಾರ ಗೌಡರ್ ಹೊಸೂರು ವಂದಿಸಿದರು. ಜಿ.ಜಿ.ಹೆಗಡೆ ಬಾಳಗೋಡ ನಿರೂಪಿಸಿದರು. ಸತೀಶ ಗೌಡರ್ ಹೆಗ್ಗೋಡಮನೆ ಸಂಘಟಿಸಿದರು.