• Slide
  Slide
  Slide
  previous arrow
  next arrow
 • ಮಾ.20ರಂದು ಸಿದ್ದಾಪುರಕ್ಕೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ: ಮಾರುತಿ ನಾಯ್ಕ

  300x250 AD

  ಸಿದ್ದಾಪುರ; ನಂದಗಡದಿಂದ ಹೊರಟ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆ ಒಂದು ದಿನದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.ಅದರಂತೆ ಮಾ.20 ರಂದು ನಮ್ಮ ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಮಧ್ಯಾಹ್ನ 4-00 ಗಂಟೆಗೆ ಆಗಮಿಸಲಿದೆ. ಈ ರಥಯಾತ್ರೆಗೆ ಮತ್ತು ಆ ಸಮಯದಲ್ಲಿ ನಡೆಯುವು ರ‍್ಯಾಲಿ ಹಾಗೂ ಸಭೆಗೆ ನಮ್ಮ ತಾಲೂಕಿನಿಂದ ಸಾಕಷ್ಟು ಕಾರ್ಯಕರ್ತರು ಬರಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಟಿ.ನಾಯ್ಕ ಹೊಸೂರು ಹೇಳಿದರು.

       ಅವರು ಪಟ್ಟಣದ ಬಾಲಭವನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದರು.ತಾಲೂಕಿಗೆ ಸಂಬಂಧಿಸಿದಂತೆ ನಾವು ರಥಯಾತ್ರೆಯನ್ನು ಪಟ್ಟಣದ ನೆಹರು ಮೈದಾನದಲ್ಲಿ ಸ್ವಾಗತ ಮಾಡಿಕೊಂಡು ಗಂಗಾಮಾತಾ ದೇವಸ್ಥಾನದಲ್ಲಿ ಒಂದು ಪೂಜಿ ಸಲ್ಲಿಸುತ್ತೇವೆ. ಅಲ್ಲಿಂದ ಪಟ್ಟಣದ ಪ್ರಮುಖ ರಸ್ತೆಯಾದ ಮಾರ್ಕೆಟ್ ರಸ್ತೆ ,ಪಟ್ಟಣ ಪಂಚಾಯತ್, ಭಗತ್ ಸಿಂಗ್ ಸರ್ಕಲ್ ಮಾರ್ಗವಾಗಿ ಸಾಗಲಿದೆ. ಪಟ್ಟಣ ಪಂಚಾಯತ ವೃತ್ತದ ಬಳಿ ಒಂದು ಸಭೆ ನಡೆಸಲ್ಲಿದ್ದೇವೆ.ಈ ರಥಯಾತ್ರೆಗೆ ನಮ್ಮ ತಾಲೂಕಿನಿಂದ ಸಾಕಷ್ಟು ಕಾರ್ಯಕರ್ತರು ಬರಲಿದ್ದಾರೆ. ಆ ರ‍್ಯಾಲಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಸೇರಿಸಿಕೊಂಡು ನಾವು ದೊಡ್ಡ ಪ್ರಮಾಣದಲ್ಲಿ ಮಾಡಲಿದ್ದೇವೆ ಎಂದರು.

  300x250 AD

  ಈ ರ‍್ಯಾಲಿ ರಾಜ್ಯಾದ್ಯಂತ ನಡೆಯಲಿದ್ದು ವಿವಿಧ ಜಿಲ್ಲೆಯ ತಾಲೂಕುಗಳಲ್ಲಿ ರ‍್ಯಾಲಿ ನಡೆಯುತ್ತಿರುವುದನ್ನು ತಾವು ಪತ್ರಿಕೆಗಳಲ್ಲಿ ಟಿವಿ ಗಳಲ್ಲಿ ನೋಡಿದ್ದೀರಿ. ಸಾಕಷ್ಟು ಕಾರ್ಯಕರ್ತರು ಸೇರಿಕೊಂಡು ಹಬ್ಬದ ವಾತಾವರಣ ಇದ್ದಂತೆ ಈ ರ‍್ಯಾಲಿಯನ್ನು ತಾಲೂಕಿನಲ್ಲಿ ನಡೆಸುತ್ತಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ನಮ್ಮ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಸೇರಿಕೊಂಡು ಉತ್ತಮ ರೀತಿಯಲ್ಲಿ ರ‍್ಯಾಲಿಯನ್ನು ಮಾಡಲು ತೀರ್ಮಾನಿಸಿದ್ದೇವೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಸೇರಿದಂತೆ ಅನೇಕ ನಾಯಕರು ಭಾಗವಹಿಸಲ್ಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಂದನ್ ಬೋರಕರ್, ರಾಜೇಂದ್ರ ಕೀಂದ್ರಿ, ತೋಟಪ್ಪ ನಾಯ್ಕ, ಜಯಂತ ಹೆಗಡೆ, ಶಾಂತಕುಮಾರ ಭಟ್ಟ, ಆದರ್ಶ ಪೈ, ರಘುವೀರ ನಾಯ್ಕ, ಜಿ.ಕೆ.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top