• Slide
  Slide
  Slide
  previous arrow
  next arrow
 • ಕೆಪಿಸಿಯಲ್ಲಿ ಪುರುಷರಂತೆ ಮಹಿಳೆಯರು ಶ್ರಮಿಸುತ್ತಿದ್ದಾರೆ: ವಿಜಯಲಕ್ಷ್ಮಿ ನಾಯ್ಕ

  300x250 AD

  ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಕೆಪಿಸಿ ಕಛೇರಿಯ ಆವರಣದಲ್ಲಿ ಕೆಪಿಸಿ ಸಿಬ್ಬಂದಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಎಸ್‌ಡಿಎಂ ಕಾಲೇಜಿನ ಪ್ರಾಚಾರ್ಯರಾದ ವಿಜಯಲಕ್ಷ್ಮಿ ನಾಯ್ಕ ಉದ್ಘಾಟಿಸಿದರು.
  ನಂತರ ಮಾತನಾಡಿದ ಅವರು, ಇಂದು ಮಹಿಳೆಯರು ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ತಾಯಿಯಾಗಿ, ಸಹೋದರಿಯಾಗಿ ಎಲ್ಲರೊಡನೆ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾಳೆ. ಪ್ರತಿ ರಂಗದಲ್ಲಿರುವಂತೆ ಕೆಪಿಸಿಯಲ್ಲಿಯೂ ಅನೇಕ ಮಹಿಳಾ ಸಿಬ್ಬಂದಿಗಳು ಇದ್ದು, ಪುರುಷ ಸಿಬ್ಬಂದಿಗಳಂತೆ ಶ್ರಮಿಸುತ್ತಿದ್ದಾರೆ ಎಂದರು.
  ಗೇರುಸೊಪ್ಪಾ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ, ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಎಲ್ಲಾ ರಂಗದಲ್ಲಿಯೂ ಇನ್ನಷ್ಟು ಸಾಧನೆ ಮಾಡಬೇಕಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

  ಕೆಪಿಸಿ ಮಹಿಳಾ ಉದ್ಯೋಗಿ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮೀ ವಿ.ಶಂಕರ್ ಮಾತನಾಡಿ, ಜಗತ್ತಿನ ಎಲ್ಲಡೆಯು, ಇಂದುವಿತರಿಸಲಾಯಿತು ಮಹಿಳೆಯರು ಉದ್ಯೋಗದಲ್ಲಿದ್ದು, ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆ, ತಾನು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿಯೂ ಯಶ್ವಸಿಯಾಗಿ  ನಿಭಾಯಿಸುತ್ತಿದ್ದಾರೆ. ಕೇವಲ ಒಂದು ದಿನ ಮಹಿಳೆತರನ್ನು ಗೌರವಿಸದೇ, ಪ್ರತಿ ದಿನವು ಅವರ ಸೇವೆ ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕಿದೆ ಎಂದರು.
  ವೇದಿಕೆಯಲ್ಲಿ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್, ಮಹೇಂದ್ರ ಜೆ.ಸಿ., ಅಧೀಕ್ಷಕ ಎಂಜಿನಿಯರ್ ರಾಯಪ್ಪ ಸಿಂಧೋಳ್, ಮೋಹನ ಜೆ.ಇ., ಕೆಪಿಸಿ ಅಧಿಕಾರಿ ಪ್ರಕಾಶ್‌ಕುಮಾರ ಎಸ್. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಿಬ್ಬಂದಿಗಳಿಂದ ಫ್ಯಾಶನ್ ಶೋ ಜರುಗಿತು. ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ಹೂವಿನ ಗಿಡ ವಿತರಿಸಲಾಯಿತು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top