• Slide
    Slide
    Slide
    previous arrow
    next arrow
  • ದಾಂಡೇಲಿಯಲ್ಲಿ ಹದಗೆಡುತ್ತಿರುವ ಒಳ ಕ್ರೀಡಾಂಗಣ; ದುರಸ್ತಿಗೆ ಆಗ್ರಹ

    300x250 AD

    ದಾಂಡೇಲಿ: ಇಲ್ಲಿನ ಸುಭಾಸನಗರದಲ್ಲಿ ನಗರಸಭೆಯ ಅಧೀನದಲ್ಲಿರುವ ಸುಂದರವಾದ ಒಳ ಕ್ರೀಡಾಂಗಣ ಕಾಲಕಾಲಕ್ಕೆ ದುರಸ್ತಿ, ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಹದಗೆಡುತ್ತಿದೆ.
    ಇಲ್ಲಿರುವ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ವುಡನ್ ಕೋರ್ಟ್ ಆಗಿದ್ದು, ಅಳವಡಿಸಲಾದ ಮರದ ಹಲಗೆಗಳು ತನ್ನ ಶಕ್ತಿಯನ್ನು ಕಳೆದುಕೊಂಡು, ಕೆಲವೆಡೆ ಮುರಿದು ಹೊಂಡಗಳು ನಿರ್ಮಾಣವಾಗಿದೆ. ಇಲ್ಲಿ ಶಟಲ್ ಬ್ಯಾಡ್ಮಿಂಟನ್ ಅಭ್ಯಾಸ ಮಾಡಲು ಬರುವ ವಿದ್ಯಾರ್ಥಿಗಳು ಜೀವಭಯದಿಂದಲೆ ಅಭ್ಯಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಟಲ್ ಆಡುವ ಮುನ್ನ ಫಿಟ್ನೆಸ್ ಮಾಡಲು ಮತ್ತು ಅಂಗಣದ ಸುತ್ತ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ಕಳೆದ ಒಂದು ವಾರದ ಹಿಂದೆ ಶಟಲ್ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವ ಶಟಲ್ ಕೋರ್ಟಿನಲ್ಲಿ ನಿರ್ಮಾಣವಾದ ಹೊಂಡದಲ್ಲಿ ಕಾಲು ಸಿಕ್ಕಿ ಬಿದ್ದು, ಗಾಯ ಮಾಡಿಕೊಂಡಿರುವ ಘಟನೆಯು ನಡೆದಿದೆ.
    ಇತ್ತೀಚಿನ ಏಳೆಂಟು ವರ್ಷಗಳಿಂದ ಇಲ್ಲಿ ಶಟಲ್ ಬ್ಯಾಡ್ಮಿಂಟನ್ ತರಬೇತಿ ನಡೆಯುತ್ತಿದ್ದು, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಯನ್ನು ಮಾಡಿ ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ. ಇಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ, ಮಹಿಳೆಯರು, ಪುರುಷರು ಸಹ ಶಟಲ್ ಬ್ಯಾಡ್ಮಿಂಟನ್ ಆಡಲು ಬರುತ್ತಿದ್ದು, ಕೋರ್ಟ್ ಹದಗೆಟ್ಟಿರುವುದರಿಂದ ಆಟವಾಡಲು ಭಯ ಕಾಡತೊಡಗಿದೆ. ಒಂದು ಒಳ್ಳೆಯ ಮತ್ತು ದೊಡ್ಡದಾದ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ನ್ನು ಹೊಂದಿರುವ ಈ ಒಳ ಕ್ರೀಡಾಂಗಣದ ಬಗ್ಗೆ ರಾಜ್ಯ, ರಾಷ್ಟ್ರಮಟ್ಟದ ಆಟಗಾರರು ಬಂದು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಆದರೆ ಸಮರ್ಪಕ ನಿರ್ವಹಣೆ ಮತ್ತು ಕಾಲಕಾಲಕ್ಕೆ ದುರಸ್ತಿ ಕಾರ್ಯ ಮಾಡದಿರುವುದರಿಂದ ಈಗಂತೂ ಒಳಕ್ರೀಡಾಂಗಣದೊಳಗಿನ ಸಮಸ್ಯೆಗಳು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮುರಿದುಕೊಳ್ಳುತ್ತಿರುವ ಮರದ ಹಲಗೆಗಳನ್ನು ತೆಗೆದು ಹೊಸದಾಗಿ ಮರದ ಹಲಗೆಗಳನ್ನು ಅಳವಡಿಸಿ, ಹೊಚ್ಚ ಹೊಸ ಕೋರ್ಟನ್ನಾಗಿಸಲು ನಗರಸಭೆ ವಿಶೇಷ ಗಮನ ನೀಡಬೇಕಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top