• Slide
  Slide
  Slide
  previous arrow
  next arrow
 • ವಸತಿ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆತಂಕಕಾರಿ: ಹೊರಟ್ಟಿ

  300x250 AD

  ಕಾರವಾರ: ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆತಂಕಕಾರಿಯಾಗಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.

  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆಡೆಗಳಲ್ಲಿ ಈ ರೀತಿಯಾದರೆ ಏನಾದರೂ ಹೇಳಬಹುದು. ಆದರೆ ಶಿಕ್ಷಣ ಸಂಸ್ಥೆಗಳಲ್ಲೇ ಈ ರೀತಿಯ ಘಟನೆಗಳು ಆತಂಕಕಾರಿಯಾಗಿದೆ. ಶಿಕ್ಷಕರನ್ನು ನಂಬಿ ಪಾಲಕರು ಮಕ್ಕಳನ್ನು ಕಳುಹಿಸಿದಾಗ ಈ ರೀತಿ ಮಾಡಿದರೆ ಮಹಾಪರಾಧವಾಗಲಿದೆ. ಈಗಾಗಲೇ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಸನ ಪ್ರಕರಣ ಸಂಬಂಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಅಂತಹ ತಪ್ಪಿತಸ್ಥರಿಗೆ ಕಠಿಣ ಕ್ರಮದ ಮೂಲಕ ತಕ್ಕ ಶಾಸ್ತಿ ನೀಡಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಹೇಳಿದರು.
  ಚುನಾವಣೆ ಘೋಷಣೆ ಪೂರ್ವದಲ್ಲೇ ರಾಜಕೀಯ ಪಕ್ಷಗಳಿಂದ ಸೀರೆ, ಕುಕ್ಕರ್ ಹಂಚಿಕೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಹಣ, ಸೀರೆ ಕುಕ್ಕರ್ ಹಂಚಿಕೆ ಪದ್ದತಿ ಮುಂದುವರಿದಲ್ಲಿ ರಾಜಕಾರಣದಲ್ಲಿ ಒಳ್ಳೆಯವರು ಬರಲು ಸಾಧ್ಯವಿಲ್ಲ. ಈ ರೀತಿ ದುಡ್ಡು ಮತ್ತೊಂದು ಮಗದೊಂದರಿಂದ ಆಟವಾಡಿದರೆ ನ್ಯಾಯ, ನೀತಿ ಎಲ್ಲಿ ಹೋಗಬೇಕು. ಮತದಾರರಾದವರು ಯಾರು ಯೋಗ್ಯರಿದ್ದಾರೆ, ಕ್ಷೇತ್ರದಲ್ಲಿ ಮತದಾರರ ಕಾಳಜಿ ಯಾರು ಮಾಡುತ್ತಾರೆ ಅಂತಹವರಿಗೆ ಮತ ಹಾಕಿ ಕಳುಹಿಸಿದರೇ ಒಳ್ಳೆಯದಾಗಲಿದೆ. ಹೀಗೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಉಳಿಯುತ್ತದೆ. ಯಾವುದು ಕೆಟ್ಟದು, ಯಾವುದು ಒಳ್ಳೆಯದು ಎನ್ನುವುದನ್ನು ತಿಳಿದುಕೊಂಡು ರಾಜ್ಯದ ಜನತೆ ಮತ ಹಾಕಿ ಒಳ್ಳೆಯ ತೀರ್ಮಾನವನ್ನೇ ಮಾಡಿ ಎಂದು ಹಾರೈಸುವುದಾಗಿ ಹೇಳಿದರು.
  ಸಂಸದ ಧ್ರುವನಾರಾಯಣ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಅವರು, ಆತ್ಮೀಯ ಸ್ನೇಹಿತನ ಅಕಾಲಿಕ ನಿಧನವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸಣ್ಣ ವಯಸ್ಸಿನಲ್ಲಿ ಅವನ ನಿಧನ ತುಂಬಲಾರದಷ್ಟು ನೋವು ಕೊಟ್ಟಿದೆ ಎಂದು ಧ್ರುವನಾರಾಯಣ ನನ್ನೊಂದಿಗೆ ಉತ್ತಮ ಒಡನಾಟ ಹೊಂದಿದ್ದವರು. ಇಂದು ಒಬ್ಬ ಶ್ರೇಷ್ಠ ಮತ್ತು ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡು ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿಯನ್ನ ನೀಡಲಿ. ರಾಜಕಾರಣಿಯಾಗಿ ಎಲ್ಲವೂ ಒಳ್ಳೆಯ ಗುಣಗಳನ್ನೇ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದು ನಮ್ಮ ದುರ್ದೈವ ಎಂದರು.
  ರಾಜಕಾರಣದಲ್ಲಿ ಕೈಬೆರಳಲ್ಲಿ ನೆನಪಿಸಿಕೊಳ್ಳುವ ರಾಜಕಾರಣಿಗಳಲ್ಲಿ ಧ್ರುವನಾರಾಯಣ ಕೂಡ ಒಬ್ಬ. ಅಂತಹ ರಾಜಕಾರಣಿಯಂತೆ ಬೇರೊಬ್ಬರನ್ನು ನಾನು ನೋಡಿಲ್ಲ. ಯಾವುದೇ ಪಕ್ಷಕ್ಕೆ ಸೀಮಿತವಾಗದೇ ಎಲ್ಲರೊಂದಿಗೂ ಆತ್ಮೀಯನಾಗಿದ್ದ. ಪ್ರತಿಬಾರಿ ಬೆಂಗಳೂರಿಗೆ ಬಂದಾಗ ನನ್ನನ್ನು ಭೇಟಿಯಾಗದೇ ಹೋಗುತ್ತಿರಲಿಲ್ಲ. ಅಂತಹ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡು ನನಗೂ ಮನಸ್ಸಿಗೆ ನೆಮ್ಮದಿಯಿಲ್ಲ ಎಂದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top