Slide
Slide
Slide
previous arrow
next arrow

ಕ್ರಿಮ್ಸ್’ನಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಉದ್ಘಾಟನೆ: ಸದುಪಯೋಗ ಪಡೆದುಕೊಳ್ಳಲು ಮನವಿ

300x250 AD

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ನೂತನವಾಗಿ ಆರಂಭಿಸಿದ ಮಕ್ಕಳ ತೀವ್ರ ನಿಗಾ ಘಟಕವನ್ನು ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕ ಡಾ.ಗಜಾನನ ನಾಯಕರವರು ಉದ್ಘಾಟಿಸಿದರು. 
ಬಳಿಕ ಮಾತನಾಡಿದ ಅವರು, ಮಕ್ಕಳ ವೈದ್ಯರ ಕರ್ತವ್ಯ ನಿಷ್ಠೆ ಪ್ರಶಂಸಿಸುತ್ತ, ಕ್ರಿಮ್ಸ್ ಕಾರವಾರದ ಮಕ್ಕಳ ವಿಭಾಗದಿಂದ ಜಿಲ್ಲೆಯ ಮಕ್ಕಳ ಆರೈಕೆಗೆ ಈ ತೀವ್ರ ನಿಗಾ ಘಟಕ ತುಂಬ ಸಹಕಾರಿಯಾಗುವುದೆಂದು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ನೆರೆದ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಕೋರಿದರು. 
ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್, ಮಕ್ಕಳ ವಿಭಾಗದ ಎಲ್ಲ ವೈದ್ಯರನ್ನು ಅವರ ಕರ್ತವ್ಯ ನಿಷ್ಠೆ ಹಾಗೂ ಸೇವೆಯನ್ನು ಹೊಗಳಿ, ವಿಭಾಗದ ಬೆಳವಣಿಗಗೆ ಹಾರೈಸಿದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಮರೋಳರವರು ಪ್ರಾಸ್ತಾವಿಕ ಭಾಷಣ ಮಾಡಿ, ಮಕ್ಕಳ ವಿಭಾಗದ ವೈದ್ಯರ ಹಾಗೂ ದಾದಿಯರ ಕರ್ತವ್ಯಪರತೆ ವಿವರಿಸಿದರು. ಮಕ್ಕಳ ತೀವ್ರ ನಿಗಾ ಘಟಕದ ಅವಶ್ಯಕತೆ ತುಂಬಲಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಆರೈಕೆ ಸಾಧ್ಯವಾದುದಕ್ಕೆ ಆಡಳಿತಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಈ ಮಕ್ಕಳ ತೀವ್ರ ನಿಗಾ ಘಟಕವು ಎನ್.ಎಮ್.ಸಿ ಸೂಚನೆಗನುಸಾರವಾಗಿ 6 ಹಾಸಿಗೆಯುಳ್ಳ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದ ಘಟಕವಾಗಿದ್ದು, ತೀವ್ರ ಅನಾರೋಗ್ಯಕ್ಕೊಳಗಾದ ಮಕ್ಕಳ ಆರೈಕೆಗಾಗಿ ಸಿದ್ಧಗೊಂಡಿರುತ್ತದೆ ಹಾಗೂ ಇಂತಹ ಸೌಲಭ್ಯದ ಘಟಕವು ಕರ್ನಾಟಕದಲ್ಲಿ ಕೇವಲ ಕೆಲವೆ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರವಿದ್ದು, ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಲು ತಿಳಿಸಿದರು.
ಸ್ಥಾನಿಕ ವೈದ್ಯಾಧಿಕಾರಿ ಡಾ.ಮಂಜುನಾಥ ಭಟ್, ಶುಶ್ರೂಷಾಧೀಕ್ಷಕಿ ಲಕ್ಷ್ಮಿ ಕೋನೆಸರ್, ಶುಶ್ರೂಷಕಿಯರ ಮೇಲ್ವಿಚಾರಕಿ ವಂದನಾ ಮೇತ್ರಿ, ವಿಭಾಗದ ಹಿರಿಯ ಹಾಗೂ ಕಿರಿಯ ವೈದ್ಯರು, ಇತರೆ ವಿಭಾಗಗಳ ವೈದ್ಯರು, ಶುಶ್ರೂಷಕರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಹಿರಿಯ ಸ್ಥಾನಿಕ ವೈದ್ಯೆ ಡಾ.ರಕ್ಷಿತಾ ದೇವದಾಸ ಸ್ವಾಗತಗೀತೆ ಹಾಡಿದರು. ಸಹ ಪ್ರಾಧ್ಯಾಪಕ ಡಾ.ಪವನಕುಮಾರ ಸ್ವಾಗತ ಭಾಷಣ ಮಾಡಿದರು. ಹಿರಿಯ ಸ್ಥಾನಿಕ ವೈದ್ಯ ಡಾ.ಅನುರಾಗ ಪಿಕಳೆ ವಂದನಾರ್ಪಣೆ ಮಾಡಿದರು. ಸಹ ಪ್ರಾಧ್ಯಾಪಕ ಡಾ.ವಿಶ್ವನಾಥ ಮಾಚಕನೂರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top