• Slide
  Slide
  Slide
  previous arrow
  next arrow
 • ಮಾ.14ಕ್ಕೆ ಬಾಳಗೋಡದಲ್ಲಿ 108 ನಾರಿಕೇಳ ಗಣಹವನ: ಯಕ್ಷಗಾನ ಪ್ರದರ್ಶನ

  300x250 AD

  ಸಿದ್ದಾಪುರ: ಬಾಳಗೋಡ ಶ್ರೀಮಹಾಗಣಪತಿ ದೇವಾಲಯದಲ್ಲಿ 108 ನಾರಿಕೇಳ ಗಣಹವನ, ಸಿದ್ಧಿಶ್ರೀ ಪ್ರಶಸ್ತಿ ವಿತರಣೆ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ಮಾ.14ರಂದು ನಡೆಯಲಿದೆ.
  ಮುಂಜಾನೆ ಶ್ರೀದೇವರ ಸನ್ನಿಧಿಯಲ್ಲಿ 108 ನಾರಿಕೇಳ, ಶ್ರೀ ಗಣಹವನ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ 7.45 ರಿಂದ ಸಿದ್ಧಿಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. 2023 ರ ಸಿದ್ಧಿಶ್ರೀ ಪ್ರಶಸ್ತಿಯು ಶಿಕ್ಷಣತಜ್ಞ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಅವರಿಗೆ ಪ್ರಶಸ್ತಿ ಪ್ರದಾನವಾಗಲಿದೆ.
  ರಾತ್ರಿ 8.45 ರಿಂದ ಚಿತ್ರಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನವಿದೆ. ಶಂಕರ ಭಟ್ಟ ಬ್ರಹ್ಮೂರು ಭಾಗವತರಾಗಿ, ಮಂಜುನಾಥ ಗುಡ್ಡೆದಿಂಬ ಮೃದಂಗ ವಾದಕರಾಗಿ, ಗಜಾನನ ಹೆಗಡೆ ಕತಗಾಲ ಚಂಡೆವಾದಕರಾಗಿ, ಶ್ರೀಧರ ಭಟ್ಟ ಕಾಸರಕೋಡ ಹಾಸ್ಯ ಕಲಾವಿದರಾಗಿ ಭಾಗವಹಿಸುವರು.
  ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ ಭಟ್ಟ ಸಿದ್ದಾಪುರ, ಕಾರ್ತಿಕ ಚಿಟ್ಟಾಣಿ, ಮಹಾಬಲೇಶ್ವರ ಗೌಡ ಇನ್ನಿತರರು ಭಾಗವಹಿಸುವರು. ಸ್ತ್ರೀ ವೇಷದಲ್ಲಿ ಕುಮಾರಿ ಕಾವ್ಯ ಗೌಡ, ಶಿವಮೊಗ್ಗ, ಅವಿನಾಶಕೊಪ್ಪ ಭಾಗವಹಿಸಲಿರುವರು ಎಂದು ದೇವಸ್ಥಾನ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top