Slide
Slide
Slide
previous arrow
next arrow

ಕೆನರಾ ಬಾರ್ ಬೆಂಡಿಂಗ್ ಅಸೋಸಿಯೇಷನ್’ನಿಂದ ಕಬ್ಬಡ್ಡಿ ಪಂದ್ಯಾವಳಿ

300x250 AD

ಶಿರಸಿ: ಇಲ್ಲಿನ ಕೆನರಾ ಬಾರ್ ಬೆಂಡಿಂಗ್ ಮತ್ತು ಸೆಂಟ್ರಿಂಗ್ ಅಸೋಸಿಯೇಷನ್ ವತಿಯಿಂದ ಲೀಗ್ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಮಾರ್ಚ್ 11ಹಾಗೂ12ರಂದು ಸಂಘಟಿಸಲಾಗಿದೆ ಎಂದು ಅಸೋಸಿಯೇಷನ್‌ ಖಜಾಂಚಿ ಆನಂದ ಸಾಲೇ‌ ತಿಳಿಸಿದರು .

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಇದೇ ಮೊದಲ ಬಾರಿಗೆ ಅಸೋಸಿಯೇಷನ್ ವತಿಯಿಂದ ಕಬಡ್ಡಿ ಪಂದ್ಯಾವಳಿ ಸಂಘಟಿಸಲಾಗಿದೆ. ಇಲ್ಲಿನ ಬಸವೇಶ್ವರ ನಗರದ ಸೌಪರ್ಣಿಕಾ ಲೇಔಟ್‌ನಲ್ಲಿ ಪಂದ್ಯಾವಳಿ ನಡೆಯಲಿದೆ.

ಪ್ರಥಮ 50ಸಾವಿರ, ದ್ವಿತೀಯ 30ಹಾಗೂ ತೃತೀಯ ಹಾಗೂ ಚತುರ್ಥ ತಲಾ 10ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಉತ್ತಮ ಆಲ್ ರೌಂಡರ್ ಗೆ ಸಾವಿರ ಉತ್ತಮ ದಾಳಿಕಾರ ಹಾಗೂ ಹಿಡಿತಗಾರ ಎಂದು ತಲಾ 2.5 ಸಾವಿರ ರೂ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.

300x250 AD

ಆಟಗಾರರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಇದ್ದು ಹೆಚ್ಚಿನ ಮಾಹಿತಿಗೆ 9945894375/9353613051 ಗೆ ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಬಾಬಣ್ಣ ಬಿಳಗಿಕ‌, ಮೊಹಮ್ಮದ್ ಶೇಖ್, ಸದಾನಂದ ಮರಾಠ ಸೇರಿ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top