ಕಾರವಾರ: ಮಾ.13ರಂದು ರಾಷ್ಟ್ರೀಯ ಜಂತುಹುಳು ನಿವರಣಾ ದಿನದ ಅಂಗವಾಗಿ 1ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತು ಹುಳುಗಳಿಗೆ ಆಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತದೆ.
ಜಂತು ಹುಳುಗಳಾದ ದುಂಡುಹುಳು, ಚಾಟಿಹುಳು ಹಾಗೂ ಕೊಕ್ಕೆ ಹುಳುಗಳು ದೇಹದ ಪೌಷ್ಠಿಕಾಂಶವನ್ನು ಅಡ್ಡಿಪಡಿಸುವ ಕಾರಣ ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ಮನಸ್ಸಿನ ಮಕ್ಕಳ ಹೆಚ್ಚಳಕ್ಕೆ ಕಾರಣವಾಗುತ್ತವೆ. ಆದ ಕಾರಣ ಅಂದು ಮಾತ್ರೆ ಪಡೆಯಲು ಬಿಟ್ಟು ಹೋದ ಮಕ್ಕಳಿಗೆ ಮಾ.25ರಂದು ಮಾಪ್ ಅಪ್ ರೌಂಡ್ ಮಾಡಿ ನೀಡಲಾಗುತ್ತದೆ. 1- 5 ವಯಸ್ಸಿನ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು 6- 19 ವರ್ಷ ವಯಸ್ಸಿನ ಮಕ್ಕಳಿಗೆ ಶಾಲಾ, ಕಾಲೇಜುಗಳಲ್ಲಿ ನೀಡಲಾಗುವುದು ಹಾಗೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕಳುಹಿಸಿ ಮಾತ್ರೆಗಳನ್ನು ನೀಡಲಾಗುವುದು.
ಆಲ್ಬೆಂಡಜೋಲ್ ಮಾತ್ರೆಗಳಲ್ಲಿ ಯಾವುದೇ ಹೆಚ್ಚಿನ ಅಡ್ಡ ಪರಿಣಾಮಗಳಿಲ್ಲ. ಅಡ್ಡ ಪರಿಣಾಮ ಕಂಡುಬoದಲ್ಲಿ ಅದರ ನಿವಾರಣೆಗೆ ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಆದುದರಿಂದ ಎಲ್ಲಾ ಪಾಲಕರು ತಮ್ಮ ಮಕ್ಕಳು ಮಾತ್ರೆಗಳನ್ನು ಸೇವಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಮಕ್ಕಳಲ್ಲಿ ಕಂಡುಬರುವ ಜಂತುಹುಳು ಬಾಧೆ ನಿವರಣೆಯಲ್ಲಿ ಸಹಕಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರದ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.