ಕಾರವಾರ: ಶಿರಸಿ ತಾಲೂಕಿನ ಯಡಗೊಪ್ಪ ನರೂರಿನ ಜಗದೀಶ ಕುರುಬರ (52) ಮಾ.01ರಂದು ಬೆಳಿಗ್ಗೆ ಮನೆಯಿಂದ ಬನವಾಸಿಗೆ ಟೇಲರ್ ಹತ್ತಿರ ಬಟ್ಟೆ ಹೊಲಿಸಿಕೊಂಡು ಬರುತ್ತೇನೆಂದು ಹೇಳಿ ಹೋದವರು ಟೇಲರ್ ಅಂಗಡಿಗೂ ಹೋಗದೇ, ಮರಳಿ ಮನೆಗೂ ಬಾರದೆ ಕಾಣೆಯಾಗಿರುವ ಬಗ್ಗೆ ಸುಮಿತ್ರಾ ಎನ್ನುವವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರೂ ಈವರೆಗೆ ಪೊಲೀಸರಿಗೆ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈತನ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿಯಿದ್ದಲ್ಲಿ ಬನವಾಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಠಾಣೆಯ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವ್ಯಕ್ತಿ ಕಾಣೆ; ದೂರು ದಾಖಲು
