• Slide
    Slide
    Slide
    previous arrow
    next arrow
  • ರಾಜನಾಥ್ ಸಿಂಗ್ ನಿವಾಸದಲ್ಲಿ ಹೋಳಿ ಆಚರಿಸಿದ ಯುಎಸ್ ಅಧಿಕಾರಿಗಳು

    300x250 AD

    ನವದೆಹಲಿ: ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಜಿನಾ ರೈಮಂಡೊ ಅವರು ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಆಗಮಿಸಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು.

    ರೈಮೊಂಡೋ ಹೋಳಿ ಹಬ್ಬವನ್ನು ಜನರೊಂದಿಗೆ ಆಚರಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ್ದು, “ಇಂತಹ ರಜಾದಿನಗಳಲ್ಲಿ ನಾನು ಇಲ್ಲಿಗೆ ಬಂದಿರುವುದು  ಗೌರವವಾಗಿದೆ. ನಾನು ಸಚಿವರಿಂದ ಸ್ವಾಗತಿಸಲ್ಪಟ್ಟಿದ್ದೇನೆ, ಇದು ಅದ್ಭುತ ಅನುಭವ. ಹೋಳಿ ಹಬ್ಬದ ಶುಭಾಶಯಗಳು!” ಎಂದಿದ್ದಾರೆ.

    ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ರೈಮೊಂಡೋ ಅವರಲ್ಲದೆ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, ಕೇಂದ್ರ ಕ್ರೀಡಾ, ಯುವ ವ್ಯವಹಾರಗಳು ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಮನೋಜ್ ತಿವಾರಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೂಡ ಉಪಸ್ಥಿತರಿದ್ದರು.

    300x250 AD

    ಅಮೇರಿಕಾದ ವಾಣಿಜ್ಯ ಕಾರ್ಯದರ್ಶಿ ಡ್ಯಾನ್ಸ್ ಮಾಡುತ್ತಾ ಡ್ರಮ್ ಬಾರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಇದಕ್ಕೂ ಮುನ್ನ ಸಚಿವ ರಾಜನಾಥ್‌ ಸಿಂಗ್‌ ಟ್ವಿಟ್‌ ಮಾಡಿ, “ಹೋಳಿ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಸಂತೋಷ ಮತ್ತು ಸಾಮರಸ್ಯದ ಸಂಕೇತವಾದ ಈ ಹಬ್ಬವು ನಿಮ್ಮ ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ಉತ್ತಮ ಆರೋಗ್ಯದ ಹೊಸ ಬಣ್ಣಗಳನ್ನು ತುಂಬಲಿ” ಎಂದು ತಿಳಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top