• Slide
    Slide
    Slide
    previous arrow
    next arrow
  • ಎಲ್ಲ‌ ದೇಶಗಳಿಗಿಂತ ಹೆಚ್ಚು ಸಹಾಯ ಮಾಡಿದ್ದು ಭಾರತ: ಶ್ರೀಲಂಕಾ ಸಚಿವ

    300x250 AD

    ನವದೆಹಲಿ: ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಿಂದ ಕುಸಿದು ಹೋಗಿರುವ ಶ್ರೀಲಂಕಾಕ್ಕೆ ಇತರ ಯಾವುದೇ ದೇಶಗಳಿಗಿಂತ ಭಾರತ ಹೆಚ್ಚು ಸಹಾಯ ಮಾಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಹೇಳಿದ್ದಾರೆ.

    ರೈಸಿನಾ ಸಂವಾದ ‘ಐಡಿಯಾಸ್ ಪಾಡ್’ನಲ್ಲಿ ಮಾತನಾಡಿದ ಅವರು, “ಭಾರತ ಸರ್ಕಾರವು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಸಹಾಯ ಮಾಡಲು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರೆ, ಭಾರತೀಯ ಜನರು ಸಹ ಶ್ರೀಲಂಕಾವನ್ನು ಬೆಂಬಲಿಸಲು ಮುಂದೆ ಬಂದರು ಎಂದಿದ್ದಾರೆ.

    “ಕೆಟ್ಟ ಸಮಯ ಬಂದಾಗ ನಿಮ್ಮ ನಿಜವಾದ ಸ್ನೇಹಿತರು ಪರೀಕ್ಷೆಗೆ ಒಳಗಾಗುತ್ತಾರೆ. ಭಾರತ ನಮ್ಮ ಬೆಂಬಲಕ್ಕೆ ನಿಂತಿದೆ, ಅಗತ್ಯಕ್ಕಾಗುವ ಸ್ನೇಹಿತನೇ ನಿಜವಾದ ಸ್ನೇಹಿತ. ಹಾಗಾಗಿ ಭಾರತವು ನಮಗಾಗಿ ಮಾಡಿದ ಸಹಾಯಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ” ಎಂದಿದ್ದಾರೆ.

    ದ್ವೀಪ ರಾಷ್ಟ್ರಕ್ಕೆ ಸುಮಾರು 3.9 ಶತಕೋಟಿ ಮೌಲ್ಯದ ದ್ವಿಪಕ್ಷೀಯ ಸಾಲ ಮತ್ತು ಮಾನ್ಯತೆಯನ್ನು ಒದಗಿಸುವ ಮೂಲಕ ಭಾರತ ಸರ್ಕಾರವು ಕೆಲವು ದಿಟ್ಟ, ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವರು ಹೇಳಿದ್ದಾರೆ.

    300x250 AD

    ಅಲ್ಲದೇ ಭಾರತ ನೀಡಿದ ಸಾಲ ಶ್ರೀಲಂಕಾಕ್ಕೆ ಯುದ್ಧದಲ್ಲಿ ಹೋರಾಡಲು ಜೀವಸೆಲೆ ನೀಡಿದೆ, ಇದು ಬಹುಶಃ ದಿವಾಳಿಯಾದ ದೇಶವನ್ನು ರಕ್ಷಿಸಿದೆ ಎಂದು ಅವರು ಬಣ್ಣಿಸಿದ್ದಾರೆ.

    ಸಾಲದ ಸುಳಿಯಲ್ಲಿ ಮುಳುಗಿರುವ ಶ್ರೀಲಂಕಾವನ್ನು ರಕ್ಷಿಸುವಲ್ಲಿ ಭಾರತದ ಪ್ರಯತ್ನವನ್ನು ಸ್ಮರಿಸಿದ ಸಬ್ರಿ, ಭಾರತವು ಪ್ರಾರಂಭದಲ್ಲಿಯೇ ಸಹಾಯಕ್ಕೆ ಬಂದಿತು. ಇತರ ದೇಶಗಳಿಗಿಂತ ಭಾರತದ ಸಹಾಯ ಹೆಚ್ಚಾಗಿದೆ. ಭಾರತವು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (IMF) ಹಣಕಾಸು ಭರವಸೆಗಳನ್ನು ಕಳುಹಿಸಿತು, ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರದ ಸಾಲದ ಪುನರ್ರಚನೆ ಕಾರ್ಯಕ್ರಮವನ್ನು ಅಧಿಕೃತವಾಗಿ ಬೆಂಬಲಿಸಿದ ಶ್ರೀಲಂಕಾದ ಸಾಲದಾತರಲ್ಲಿ ಭಾರತ ಮೊದಲನೆಯದು ಎಂದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top