• Slide
    Slide
    Slide
    previous arrow
    next arrow
  • ಅಂಬೇಡ್ಕರ್ ಬರೆದ ಸಂವಿಧಾನ ಪ್ರಪಂಚಕ್ಕೆ ಮಾದರಿ: ಸಚಿವ ಹೆಬ್ಬಾರ್

    300x250 AD

    ಮುಂಡಗೋಡ: ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾ ಮಟ್ಟದ ಸಮನ್ವಯ ಸಮ್ಮಿಲನ ಅಹಿಂದ ವರ್ಗಗಳ ಸಂವಿಧಾನಾತ್ಮಕ ಆಶಯಗಳ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಪಟ್ಟಣದ ವಿವೇಕಾನಂದ ಬಯಲು ಮಂಟಪ ರಂಗಮoದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮವನ್ನು ಶಾಸಕ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ವಿದ್ಯೆ ನೀಡಿದರೆ ಡಾ.ಬಾಬಾಸಾಹೇಬ ಅಂಬೇಡ್ಕರ ಆಶಯ ಪೂರ್ಣಗೊಳ್ಳುತ್ತದೆ ಆದ್ದರಿಂದ ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು. ಅಂಬೇಡ್ಕರ ಬರೆದಂತ ಸಂವಿಧಾನ ದೇಶಕ್ಕೆ ಮಾತ್ರ ಅಲ್ಲ ಪ್ರಪಂಚಕ್ಕೆ ಮಾದರಿ ಎಂದರು. ಮಹಾಪುರಷರಾದ ಮಹಾತ್ಮಗಾಂಧಿ ಬಾಬಾ ಸಾಹೇಬ ಅಂಬೇಡ್ಕರ, ಛತ್ರಪತಿ ಶಿವಾಜಿ ಹಾಗೂ ಇತರೆ ಮಹಾನ ವ್ಯಕ್ತಿಗಳು ಒಂದು ಜಾತಿಗೆ ಸಿಮೀತಗೊಳಿಸದೆ ಅವರ ಆದರ್ಶಗಳು ಮಾನವ ಜನಾಂಗಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದರು.
    ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹೆಣ್ಣು-ಗಂಡು ಎರಡೇ ಜಾತಿ ಇದನ್ನು ಹೊರತು ಪಡಿಸಿ ಸಮಾಜದಲ್ಲಿ ಜಾತಿ ಭೇದವನ್ನು ಮಾಡಬಾರದು ಎಂದು ತಿಳಿಸಿದ್ದರು. ಅಂಬೇಡ್ಕರರವರು ಸಂವಿಧಾನ ಬರೆದನಂತರವು ದೇಶದಲ್ಲಿ ಜಾತಿ ಭೇದ ನಿವಾರಣೆಗೊಳ್ಳಲು ಸಾಧ್ಯವಾಗಲಿಲ್ಲ. ಸಮಾಜದಲ್ಲಿ ಮಾನವಿತೆಯಿಂದ ನಡೆದುಕೊಂಡರೆ ಶಾಂತಿಯಿoದ ಜೀವನ ಮಾಡಲು ಸಾಧ್ಯತೆ ಇದೆ ಎಂದರು.
    ಕದಸoಸ ರಾಜ್ಯಾಧ್ಯಕ್ಷ ಎಂ.ಗುರುಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಬಾಬಾ ಸಾಹೇಬ ಅಂಬೇಡ್ಕರ ಭಾರತದ ಸಂವಿಧಾನ ಬರೆಯಲು ತೆಗೆದುಕೊಂಡಿರುವ ಸಮಯ 2 ವರ್ಷ 11 ತಿಂಗಳು 18 ದಿನಗಳು ತೆಗೆದುಕೊಂಡು ಅದನ್ನು 1950 ನವಂಬರ 26 ಈ ದೇಶಕ್ಕೆ ಅರ್ಪಣೆ ಮಾಡಿದರು. ಅಂಬೇಡ್ಕರ ಬರೆದಂತ ಸಂವಿಧಾನವನ್ನು ಅರ್ಪಣೆ ಮಾಡುವ ಸಮಯದಲ್ಲಿ ಈ ದೇಶಕ್ಕೆ ಸಂಬAದಪಟ್ಟ ಭೂಮಿ, ಸಂಪತ್ತು ಮತ್ತು ಅಧಿಕಾರ ಸರಿಸಮಾನವಾಗಿ ಹಂಚಿದರೆ ದೇಶದಲ್ಲಿ ಸಮಾನತೆ ಬರಲು ಸಾಧ್ಯ. ನಾವು 21 ಶತಮಾನದಲ್ಲಿದ್ದರೂ ಅವರ ಆಶಯ ಈಡೇರಿದಿಯಾ ಸಮಾನತೆ ದೇಶದಲ್ಲಿದಿಯಾ ಎಂದರು.
    ಅಹಿAದ ನಾಯಕ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದು ಸರಕಾರದ ಸಚಿವರೊಬ್ಬರು ಹೇಳುತ್ತಾರೆ ಇದಕ್ಕೆ ಆ ಪಕ್ಷದ ಸರಕಾರ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕುವುದಿರಲಿ ಅವರನ್ನು ಕರೆಸಿ ಎಚ್ಚರಿಕೆ ಸಹಿತ ನೀಡಲಿಲ್ಲ. ಮತ್ತೊಬ್ಬ ಚಿಕ್ಕಮಗಳೂರಿನ ನಾಯಕ ಹೇಳುತ್ತಾರೆ ಸಂವಿಧಾನ ದೇಶಕ್ಕೆ ಅರ್ಪಣೆಗೊಂಡಾಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರಿಂದ ಸಂವಿಧಾನ ಒಪ್ಪಿಕೊಂಡಿದೆ ನಾವು ಇರುತ್ತಿದ್ದರೆ ಒಪ್ಪಿಕೊಳ್ಳುತ್ತಿರಲಿಲ್ಲ ಎನ್ನುವ ಧಾಟಿಯಲ್ಲಿ ಹೇಳುತ್ತಾರೆ. ಉತ್ತರಕನ್ನಡದ ನಾಯಕರೊಬ್ಬರು ನಾವು ಪೂರ್ಣಪ್ರಮಾಣವಾಗಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಬ್ಬ ನಾಯಕ ರಾಮಜಪ ಮಾಡುವರು ಮಾತ್ರ ಭಾರತದಲ್ಲಿರಲಿ ಮಾಡದೇ ಇರುವರು ಪಾಕಿಸ್ಥಾನಕ್ಕೆ ಹೋಗಲಿ ಎನ್ನುತ್ತಾರೆ ಹೀಗಾದರೆ ನಮ್ಮ ಡಾ. ಬಾಬಾ ಸಾಹೇಬ ಅಂಬೇಡ್ಕರ ಅಂದುಕೊoಡಿದ್ದ ಆಶಯಗಳು ಪೂರ್ಣಗೊಳ್ಳಲು ಇವರು ಬಿಡುತ್ತಾರೆಯೇ ಹಾಗೂ ನಾವು ದೇಶದಲ್ಲಿ ಸಮಾನತೆಯಿಂದ ಇರಲು ಸಾಧ್ಯವೆ ಎಂದು ಪ್ರಶ್ನಿಸಿದರು.
    ಯಲ್ಲಾಪುರ ಟಿಕೇಟ್ ಅಕಾಂಕ್ಷಿ ಮರಿಯೋಜಿರಾವ ಮಾತನಾಡಿ, ಉಚ್ಚಜಾತಿಯ ರಾಜಕೀಯ ನಾಯಕರು ವೇದಿಕೆ ಮೇಲೆ ನಾವೆಲ್ಲ ಜಾತ್ಯಾತಿತರು. ನಮ್ಮಲ್ಲಿ ಬೇಧಭಾವ ಇರುಬಾರದು ನಾವೆಲ್ಲ ಒಂದೇ ಎನ್ನುತ್ತಾರೆ ಅವರ ಮನೆಗಳಿಗೆ ದಲಿತರು ಹೋದರೆ ಎಲ್ಲಿ ಕುಳ್ಳರಿಸುತ್ತಾರೆ ಎಂಬುದು ಮೊದಲು ನಾವೇಲ್ಲ ಅರ್ಥಮಾಡಿಕೊಳ್ಳಬೇಕು. ಉಚ್ಚ ಜಾತಿಯ ನಾಯಕರು ಸಾರ್ವಜನಿಕರ ವೇದಿಕೆ ಮೇಲೆ ಹೇಳಿದ್ದು ಅದನೆಲ್ಲಾ ಜೀವನದಲ್ಲಿ ಪಾಲಿಸುತ್ತಾರೆಯೇ ಎಂದು ಉಚ್ಚ ಜಾತಿಯ ನಾಯಕರಿಗೆ ಛಾಟಿ ಬೀಸಿ ವೇದಿಕೆ ಮೇಲಿದ್ದವರಿಂದ ಹಾಗೂ ಸಭಿಕರಿಂದ ಚಪ್ಪಾಳೆಗಿಟ್ಟಿಸಿದರು.
    ಬೌದ್ಧ ಗುರುಗಳಾದ ಘೀಶೆ ಚಾಂಗ್‌ಚುಪ್ ಸಾಂಗೆ ಹಾಗೂ ಘೀಶೆ ಲೊಬಸಾಂಗ್ ತೆನ್ಪೆ ಸಾನಿಧ್ಯವಹಿಸಿದ್ದರು. ಪ್ರಸ್ತಾವಿಕವಾಗಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕ್ಕಿರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನಿರೂಪಣೆ ನಾಗೇಂದ್ರ ಪಿ., ಸ್ವಾಗತ ಎಸ್.ಡಿ.ಮುಡೆಣ್ಣವರ ಹಾಗೂ ವಂದರ್ನಾಪಣೆಯನ್ನು ಮುತ್ತುರಾಜ ಹೊನ್ನಣ್ಣವರ ಮಾಡಿದರು. ವೇದಿಕೆ ಮೇಲೆ ಬಸವರಾಜ ನಡುವಿನಮನಿ, ವಾಸು ದಾವಣಗೇರಿ, ಹರೀಶ ಭೋವಿ, ಮಹ್ಮದರಫೀಕ ಇನಾಮದಾರ, ಎಮ್.ಎಚ್.ಕಲಾಲ, ಪಿ.ಜಿ.ಪಾಟೀಲ, ರಾಘವೇಂದ್ರ ಮಳಗಿಕರ ಮುಂತಾದವರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top