ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದಲ್ಲಿ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ, ನಟರಾಜ ಎಂ.ಹೆಗಡೆ ಮತ್ತು ಗೆಳೆಯರ ಬಳಗ ಹಾಗೂ ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಇವುಗಳ ಆಶ್ರಯದಲ್ಲಿ ನಾಣಿಕಟ್ಟಾ ಸಾಂಸ್ಕೃತಿಕ ಉತ್ಸವ, ಗೌರವ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮಾತನಾಡಿ ನಮ್ಮ ನಾಡಿನ ಕಲೆಗಳು ಶ್ರೇಷ್ಠವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಯಕ್ಷಗಾನ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದ್ದಲ್ಲದೇ ಜೀವನಕ್ಕೆ ಅತ್ಯವಶ್ಯವಾಗಿದೆ. ಯಕ್ಷಗಾನ ಸಂಘಟಕರಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಉದ್ಯಮಿ ಉಪೇಂದ್ರ ಪೈ ಶಿರಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿ.ವಿನಾಯಕ ಎಸ್.ಭಟ್ಟ ಮತ್ತೀಹಳ್ಳಿ, ಎ.ಜಿ.ನಾಯ್ಕ ಬರಣಿ, ತ್ಯಾಗಲಿ ಗ್ರಾಪಂ ಅಧ್ಯಕ್ಷ ಲಕ್ಷ್ಮಿನಾರಾಯಣ ಎಂ.ಹೆಗಡೆ ಹೂಡ್ಲಮನೆ, ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನರಹರಿ ಹೆಗಡೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ ನಾಯ್ಕ, ಯಕ್ಷಮಿತ್ರಬಳಗದ ಹಿರಿಯರಾದ ಎಂ.ಎo.ಹೆಗಡೆ ಹಂಗಾರಖoಡ, ಪ್ರಭಾಕರ ಹೆಗಡೆ ಸೂರನ್, ರವೀಂದ್ರ ಹೆಗಡೆ ಸೂರನ್, ಉಮೇಶ ಹೆಗಡೆ ಸೂರನ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಅವರನ್ನು ಸನ್ಮಾನಿಸಲಾಯಿತು.ನಾಣಿಕಟ್ಟಾ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಭರತನಾಟ್ಯ, ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಂತರ ವೀರಾಂಜನೇಯ ಯಕ್ಷಮಿತ್ರಬಳಗ ಬಂಗಾರಮಕ್ಕಿ ಹಾಗೂ ಅತಿಥಿಕಲಾವಿದರಿಂದ ಭೀಷ್ಮವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಶಂಕರ ಭಟ್ಟ ಬ್ರಹ್ಮೂರು, ಕು.ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸನ್ನ ಭಟ್ಟ ಹೆಗ್ಗಾರ ಸಹಕರಿಸಿದರು.
ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ವಿದ್ಯಾಧರರಾವ್ ಜಲವಳ್ಳಿ, ಡಾ.ಪ್ರದೀಪ ಸಾಮಗ. ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಭಟ್ಟ ಕಾಸರಕೋಡ,ಮಹಾಬಲೇಶ್ವರ ಗೌಡ, ಅವಿನಾಶ ಕೊಪ್ಪ, ರಾಮಚಂದ್ರ ಮುಗದೂರು, ಆನಂದ ಹೆಗಡೆ ಶೀಗೆಹಳ್ಳಿ, ಗಣೇಶ ಹೆಗಡೆ ಸೂರನ್ನ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು. ನಿರ್ಮಲಾ ಹೆಗಡೆ, ವಾಸುದೇವ ಎನ್ ನಾಯ್ಕ, ವಾಣಿ ಹೆಗಡೆ, ನಟರಾಜ ಎಂ.ಹೆಗಡೆ, ರಮೇಶ ಎನ್.ಬಾಳೇಕೈ, ರಮೇಶ ಟಿ.ನಾಯ್ಕ, ಶಂಕರನಾರಾಯಣ ಆದಿದ್ರಾವಿಡ,ಅಕ್ಷಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಯಕ್ಷಗಾನ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆ: ಎನ್.ಬಿ.ಹೆಗಡೆ
