• Slide
    Slide
    Slide
    previous arrow
    next arrow
  • ಮುಷ್ಕರದಲ್ಲಿ ಭಾಗವಹಿಸಲು ಅವಕಾಶಕ್ಕೆ ಮನವಿ

    300x250 AD

    ಕುಮಟಾ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸೂಚನೆ ಮೇರೆಗೆ ಮಾ.6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅನಿರ್ದಾಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಪುರಸಭೆಯ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರು ಮುಖ್ಯಾಧಿಕಾರಿ ಅಜಯ ಭಂಡರ‍್ಕರ್‌ಗೆ ಮನವಿ ಸಲ್ಲಿಸಿದರು.
    ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅನಿರ್ದಾಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸೂಚನೆ ನೀಡಿದೆ. ಅದರಂತೆ ಪುರಸಭೆಯಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಮತ್ತು ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು. ಮಾಸಿಕ ವೇತನವನ್ನು ನೇರವಾಗಿ ನೌಕರರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಇನ್ನಿತರೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಾಷ್ಟಾವಧಿ ಮುಷ್ಕರಕ್ಕೆ ತಾವು ಸಹಕಾರ ನೀಡಬೇಕು. ಮತ್ತು ಅನಿರ್ದಾಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಮನವಿ ಸಲ್ಲಿಕೆಯಲ್ಲಿ ಹೊರಗುತ್ತಿಗೆ ನೌಕರರಾದ ಲಕ್ಷ್ಮಿನಾರಾಯಣ ಹೆಗಡೆ, ತನುಜಾ ಭಂಡಾರಿ, ಗೋವಿಂದ ಆಚಾರಿ, ಶೈಲಾ ನಾಯ್ಕ, ನಮೃತ ನಾಯ್ಕ, ಮಹರ್ಷ ಗಾಂವ್ಕರ್, ಶಕುಂತಲಾ ಭಂಡಾರಿ, ಎಂ ಜಿ ನಾಯ್ಕ, ರೇಖಾ , ನಂದನ ನಾಯ್ಕ, ನಾರಾಯಣ ಶೇಟ್, ಪ್ರಕಾಶ ಗಾವಡಿ, ನಾಗರಾಜ ಬೈಲೂರು, ಗೋವಿಂದ ಗೌಡ, ಗಿರೀಶ ಗೌಡ, ಸತೀಶ ಪಟಗಾರ, ಪ್ರಭಾಕರ ಮುಕ್ರಿ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top