• Slide
    Slide
    Slide
    previous arrow
    next arrow
  • ನಶಿಸಿ ಹೋಗುತ್ತಿರುವ ವಿಶಿಷ್ಟ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು:ಜಯಲಕ್ಷ್ಮಿ ರಾಯಕೋಡ್

    300x250 AD

    ಕಾರವಾರ: ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತೀ ಅವಶ್ಯಕವಾಗಿದೆ ಎಂದು ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.
    ನಗರದ ಜಿಲ್ಲಾ ರಂಗಮOದಿರದಲ್ಲಿ ಆಯೋಜಿಸಲಾಗಿದ್ದ, ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಡೋಲು ಬಾರಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ನೆನಸಿಕೊಂಡ ಅವರು ಆ ಕಾಲದ ಹಳೆಯ ಕಸೂತಿ ಕಲೆ, ಜಾನಪದ ಕಲೆ ಹಾಗೂ ವಾದ್ಯ ಇವೆಲ್ಲವುಗಳನ್ನು ನಮ್ಮ ಹಿರಿಯರು ನಮಗೆ ತಲತಲಾಂತರದಿOದ ಉಡುಗೊರೆಯಾಗಿ ನೀಡಿದ್ದು ಇಂತಹ ಕಲೆಗಳನ್ನು ಕಾಪಾಡಿಕೊಂಡು ಮುಂದುವರೆಸಿಕೊAಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
    ಇAತಹ ಕಲೆಗಳನ್ನು ಕಾಪಾಡಿದರೆ ಮಾತ್ರ ನಮ್ಮ ಈಗಿನ ಅಥವಾ ಮುಂದಿನ ಪೀಳಿಗಗೆ ಈ ಕಲೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು. ಈಗಿನ ಸಂಸ್ಕೃತಿಗೆ ಹೊಂದಿಕೊOಡಿರುವOತೆ ನಮ್ಮ ಹಿಂದಿನ ಸಂಸ್ಕೃತಿಯನ್ನು ಸಹ ನಾವು ಅಳವಡಿಸಿಕೊಂಡು ಸಾಗುವುದು ಅವಶ್ಯಕವಿದೆ ಎಂದರು. ಜಿಲ್ಲೆಯಲ್ಲಿ ಹಲವಾರು ಸಂಸ್ಕೃತಿಯ ಜಾನಪದ ನೃತ್ಯಗಳು, ಲಾವಣಿಗಳು, ಫುಗಡಿ ನೃತ್ಯ, ಬೇಡರವೇಷ, ಹಾಲಕ್ಕಿ ತಾರ್ಲೆ ನೃತ್ಯ, ಧಮಾಮಿ ನೃತ್ಯ, ಗುಮಟಾಪಾಂಗ ಹೀಗೆ ಹಲವಾರು ಕಲೆಗಳು ಈ ಪ್ರದೇಶದಲ್ಲಿ ಕಾಣುತ್ತಿರುವುದು ನಮಗೆ ಹೆಮ್ಮೆ ತರುವಂತಹ ವಿಷಯವಾಗಿದೆ. ಈ ತೇರಾನಾದ ಕಲೆಗಳಿಂದ ನಮ್ಮ ಪ್ರದೇಶದ ಸಂಸ್ಕೃತಿಯನ್ನು ಕಾಣಲು ನಮಗೆ ಸಾಧ್ಯವಾಗುತ್ತದೆ ಎಂದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಮ್. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿದವರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲೆಯ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದೆ ಮೇರಿ ಗರಿಬಾಚೆ, ಜೂಲಿಯಾನ ಫರ್ನಾಂಡೀಸ್, ವಿಷ್ಣು ರಾಣೆ, ಫಕ್ಕೀರಪ್ಪ ಭಜಂತ್ರಿ, ಸೂರ್ಯಪ್ರಕಾಶ ಬಶೆಟ್ಟಿ, ಉದಯ ಬಶೆಟ್ಟಿ, ಪದ್ಮಾವತಿ ಗೌಡ, ಶಿಕ್ಷಕಕ ಮಹದೇವ ರಾಣೆ ಹಾಗೂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top