Slide
Slide
Slide
previous arrow
next arrow

ಕೆರೆ ಹೆಬ್ಬಾರರಿಂದ ಮತ್ತೊಂದು ಮಹತ್ಕಾರ್ಯ: ಜೈನ ಮಠದ ಕೆರೆ ಅಭಿವೃದ್ಧಿಗೆ ಚಾಲನೆ

300x250 AD

ಶಿರಸಿ : ಕೆರೆ ಹೆಬ್ಬಾರೆಂದೇ ಪ್ರಸಿದ್ಧರಾಗಿರುವ ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಜೈನ ಮಠದ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.‌

ಕಳೆದ ಹಲವು ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ತಾಲೂಕಿನ ಸೋಂದಾ ಜೈನ ಮಠದ ಆವರಣದಲ್ಲಿರುವ ಕೆರೆಯನ್ನು ಹೂಳೆತ್ತಲು ಹೆಬ್ಬಾರ್ ಮುಂದಾಗಿದ್ದು, ಭಾನುವಾರ ಪೂಜೆ ಸಲ್ಲಿಸಿ ಅಧಿಕೃತವಾಗಿ ಕೆಲಸವನ್ನು ಆರಂಭಿಸಿದರು.‌

ಅಂದಾಜು 30 ಗುಂಟೆ ಕ್ಷೇತ್ರದಲ್ಲಿ ಹರಡಿಕೊಂಡಿರುವ ಕೆರೆ ಅಭಿವೃದ್ಧಿಯಿಂದ ಅಂದಾಜು ಹತ್ತಾರು ಎಕರೆ ಅಡಿಕೆ ತೋಟ, ಭತ್ತದ ಗದ್ದೆಗೆ ನೀರಾವರಿ ಅನುಕೂಲ ಆಗಲಿದೆ. ಇದರಿಂದ ಜೈನ ಮಠದ ಗುರುಗಳ ಆಶೀರದವಾದದೊಂದಿಗೆ ಶ್ರೀನಿವಾಸ ಹೆಬ್ಬಾರ್ ತಮ್ಮ ಸ್ವಂತ ಖರ್ಚಿನಲ್ಲಿ ಹಿಟಾಚಿ, ಟ್ರಾಕ್ಟರ್ ಬಳಸಿ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.‌

ಇದೇ ವೇಳೆ ಮಾತನಾಡಿದ ಹೆಬ್ಬಾರ್, ಶಿರಸಿ ಜೀವಜಲ ಕಾರ್ಯಪಡೆಯಿಂದ ಹಲವಾರು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಈಗ ಜೈನ ಮಠದ ಆವರಣದಲ್ಲಿರುವ ಕೆರೆ ಹೂಳುತ್ತುವ ಕಾರ್ಯ ಆರಂಭವಾಗಿದೆ‌. ಅಂದಾಜು 30-35 ಅಡಿ ಹೂಳು ಇರುವ ಸಾಧ್ಯತೆಯಿದೆ. ಹಿಟಾಚಿಯ ಮೂಲಕ ಸ್ವಚ್ಚಗೊಳಿಸುವ ಕೆಲಸ ಆಗಲಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಪಿ.ಹೆಗಡೆ ವೈಶಾಲಿ, ನಾಗರಾಜ ಶೆಟ್ಟಿ, ಅಶೋಕ ಭಟ್ಟ ಮುಂತಾದವರು ಇದ್ದರು.‌

ಕೋಟ್ :
ಹಲವು ಕರೆಗಳನ್ನು ಸ್ವಚ್ಚಗೊಳಿಸಿದ ನಂತರ ತ್ಯಾಜ್ಯ ಬಿಡಲಾಗುತ್ತಿದೆ. ಅದನ್ನು ಮಾಡದೇ ನೀರಿನ ಮೂಲ ಸರಿಯಾಗಿ ಉಳಿಸಿಕೊಳ್ಳಬೇಕು. ಕೆರೆ ಹೂಳೆತ್ತುವುದರಿಂದ ಸಮೀಪ ಜಮೀನುಗಳಿಗೆ ಅನುಕೂಲ ಆಗಲಿದೆ. ಹೆಚ್ಚೆಚ್ಚು ಈ ರೀತಿ ಸಾಮಾಜಿಕ ಕೆಲಸ ಆಗಬೇಕು.
ಶ್ರೀನಿವಾಸ ಹೆಬ್ಬಾರ್, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ.‌

Share This
300x250 AD
300x250 AD
300x250 AD
Back to top