Slide
Slide
Slide
previous arrow
next arrow

ಹಾಲು ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ AMCU ಸೆಟ್‌ ಮಹತ್ವದ ಪಾತ್ರ ವಹಿಸಲಿದೆ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಅನುದಾನದ ಅಡಿಯಲ್ಲಿ ನೀಡಲಾಗುವ ಎ.ಎಂ.ಸಿ.ಯು. ಸೆಟ್‌ನ್ನು  ತಾಲೂಕಿನ ಇಟಗುಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೆಂಟಕರಮಣ ಮಹಾಬಲೇಶ್ವರ ಹೆಗಡೆ ಹಾಗೂ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ ಸೀತಾರಾಮ ಹೆಗಡೆ ಇವರುಗಳಿಗೆ ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ನಗರದ ಅಗಸೆಬಾಗಿಲಿನ ಒಕ್ಕೂಟದ ಉಪವಿಭಾಗ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಕ್ಕೂಟದ ವತಿಯಿಂದ ಅರ್ಹ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಎ.ಎಂ.ಸಿ.ಯು ಸೆಟ್‌ಗಳನ್ನು ಅನುದಾನದ ಅಡಿಯಲ್ಲಿ ವಿತರಿಸುವ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆಯೇ ಶಿರಸಿ ತಾಲೂಕಿನ ಒಟ್ಟೂ ಹದಿನೈದು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗಾಗಲೇ ಎ.ಎಂ.ಸಿ.ಯು ಸೆಟ್‌ಗಳನ್ನು ನೇರವಾಗಿ ತಲುಪಿಸಲಾಗಿದೆ ಎಂದರು. ಹಾಲು ಸಂಘಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಗೂ ಸಂಘಗಳು ಉತ್ತಮ ಗುಣಮಟ್ಟದ ಹಾಲನ್ನು ಖರೀದಿಸಲು ಉಪಯೋಗವಾಗುವಂತೆ ದೊಡ್ಡ ಪ್ರಮಾಣದ ಅನುದಾನದವನ್ನು ಸಂಘಗಳಿಗೆ ಒದಗಿಸಿ ಸಂಘಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎ.ಎಂ.ಸಿ.ಯು. ಸೆಟ್‌ಗಳನ್ನು ಈ ಮೂಲಕ ವಿತರಿಸಿಲಾಗಿದೆ ಎಂದರು. ಒಂದು ಎ.ಎಂ.ಸಿ.ಯು. (Automatic Milk Collection Unit) ಸೆಟ್‌ ಅಂದರೆ ಅದರಲ್ಲಿ ಕಂಪ್ಯೂಟರ್‌, ಪ್ರಿಂಟರ್‌, ದೊಡ್ಡ ಗಾತ್ರದ ಡಿಸ್‌ಪ್ಲೆ ಹೊಂದಿದ ಮೊನಿಟರ್‌, ಎ.ಎಂ.ಸಿ.ಯು ಸೋಪ್ಟ್‌ವೇರ್‌, ತೂಕದ ಯಂತ್ರ, ಯು.ಪಿ.ಸ್‌. ಒಳಗೊಂಡಂತಹ ಎರಡು ಬ್ಯಾಟರಿಗಳು, ವಿದ್ಯುತ್‌ ಚಾಲಿತ ಆಟೋಮೆಟಿಕ್‌ ಹಾಲಿನ ಫ್ಯಾಟ್‌ ಪರಿಶೀಲನಾ ಯಂತ್ರಗಳನ್ನು ಒಳಗೊಂಡಿರುತ್ತದೆ. ಇವೆಲ್ಲದರ ಮೊತ್ತ ಒಟ್ಟಾರೆಯಾಗಿ ರೂ. 1,54,927.50/- ಗಳಷ್ಟಾಗುತ್ತಿದ್ದು, ಎನ್.ಪಿ.ಡಿ.ಡಿ. ಅವರಿಂದ ರೂ. 88,530/- ಗಳ, ಅನುದಾನ, ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ರೂ. 33,198.75/- ಗಳ ಅನುದಾನ ನೀಡಲಾಗುತ್ತಿದ್ದು, ಇನ್ನುಳಿದ ರೂ. 33,198.75/- ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘದವರು ಒಕ್ಕೂಟಕ್ಕೆ ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಿದರು.

300x250 AD

ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ವಿದ್ಯುತ್‌ ಸಮಸ್ಯೆ ಇರುವ ಕಾರಣ ಸೌರ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ಹಾಗೂ ಕಡಿಮೆ ದರದಲ್ಲಿ ಹಾಲು ಉತ್ಪಾದಕ ರೈತರಿಗೆ ಮೇವಿನ ಅಚ್ಚುಗಳನ್ನು ಸಹ ವಿತರಿಸುವ ಬಗ್ಗೆ ಕುರಿತು ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಅತೀ ಶೀಘ್ರದಲ್ಲಿ ಜಿಲ್ಲೆಯಾದ್ಯಂತ ಅರ್ಹ ಹಾಲು ಉತ್ಪಾದಕ ರೈತರಿಗೆ ಸೌರ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ಹಾಗೂ ಮೇವಿನ ಅಚ್ಚುಗಳನ್ನು ಸಹ ವಿತರಿಸಲಾಗುವುದು ಎಂದರು. ಇದೇ ರೀತಿಯಲ್ಲಿ ಜಿಲ್ಲೆಯಾದ್ಯಂತ ಹಾಲು ಉತ್ಪಾದನೆಯನ್ನು ಹಾಗೂ ಹಾಲಿನ ಮಾರಾಟವನ್ನು ಹೆಚ್ಚಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್. ಬಿಜೂರ್‌, ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ್‌ ಎಸ್‌ ಆರ್‌, ವಿಸ್ತರಣಾಧಿಕಾರಿ ಮೌನೇಶ ಎಂ. ಸೋನಾರ, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top