• Slide
    Slide
    Slide
    previous arrow
    next arrow
  • ಇಂದು ತ್ಯಾಗಲಿಯಲ್ಲಿ ಜಾಗರಣೆ: ‘ಮಾರುತಿ ಪ್ರತಾಪ’ ಯಕ್ಷಗಾನ

    300x250 AD

    ಸಿದ್ದಾಪುರ: ತಾಲೂಕಿನ ತ್ಯಾಗಲಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮಾ.4, ಶನಿವಾರ ರಾತ್ರಿ 8 ರಿಂದ ರಥೋತ್ಸವದ ನಿಮಿತ್ತ ಜಾಗರಣೆಯನ್ನು ಹಮ್ಮಿಕೊಳ್ಳಲಾಗಿದೆ.

    ಜಾಗರಣೆ ಪ್ರಯುಕ್ತ ವಿಶಾರದಾ ವೇದಿಕೆಯಲ್ಲಿ ಶಬರ ಸಂಸ್ಥೆ ರಿ, ಸೋಂದಾ ಇವರಿಂದ ಯಕ್ಷಗಾನ ಹಾಗೂ ಸ್ಥಳೀಯ ಬಾಲ ಹಾಗೂ ಯುವ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ರಾತ್ರಿ 8-00 ರಿಂದ ನಡೆಯಲಿದ್ದು  ಅಧ್ಯಕ್ಷತೆಯನ್ನು ಪ್ರಗತಿ ಪ್ಲಾಸ್ಟಿಕ್ಸ್‌’ನ ರಾಮಚಂದ್ರ ಹೆಗಡೆ (ತೇರಗಡ್ಡೆ ಮನೆ, ತ್ಯಾಗಲಿ)  ವಹಿಸಲಿದ್ದು ಉದ್ಘಾಟನೆಯನ್ನು ನಾದ ತರಂಗದ ಶ್ರೀಧರ ಸಿ. ಹೆಗಡೆ ಶಿಂಗು ನೆರವೇರಿಸಲಿದ್ದಾರೆ.
    ಅಭ್ಯಾಗತರಾಗಿ ಪ್ರೈಮ್ ಮಷಿನ್ ಬೂರ್ಸ್ ರಾಜಶೇಖರ ಹೆಗಡೆ, ಹಂಗಾರಖಂಡ, ವಿಸುರಾ ಕನ್ಸಟಿಂಗ್ LLP ಸುರೇಶ ಹೆಗಡೆ, ಮಂತಿಗೆಮನೆ
    ಶಬರ ಸಂಸ್ಥೆ, ಸೋಂದಾದ‌ ನಾಗರಾಜ ಜೋಷಿ ಆಗಮಿಸಲಿದ್ದಾರೆ.

    300x250 AD

    ನಂತರದಲ್ಲಿ ಶಬರ ಸಂಸ್ಥೆ ಸೋಂದಾ, ಶಿರಸಿ ಇವರಿಂದ ದಿ. ತಿಮ್ಮಪ್ಪ ಹೆಗಡೆ ಜಾನಕ್ಕೆ ವಿರಚಿತ ‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ಹಿಮ್ಮೇಳ ಭಾಗವತರಾಗಿ ಶ್ರೀಕೃಷ್ಣ ಹೆಗಡೆ ಕನಕನಹಳ್ಳಿ ಮದ್ದಲೆಯಲ್ಲಿ ಶ್ರೀಪಾದ ಭಟ್ಟ ಮೂದಗಾರು ಚಂಡೆಯಲ್ಲಿ ವಿಘ್ನೇಶ್ವರ ಕೆಸರಕೊಪ್ಪ ರಂಜಿಸಲಿದ್ದು, ಮುಮ್ಮೇಳದಲ್ಲಿ ಭಾಸ್ಕರ ಗಾಂವ್ಕರ, ಶ್ರೀಧರ ಚಪ್ಪರಮನೆ, ಸದಾಶಿವ ಮಂವಳ್ಳಿ, ನಿರಂಜನ ಜಾಗ್ನಳ್ಳಿ, ಮಹಾಬಲೇಶ್ವರ ಗೌಡ, ಪ್ರವೀಣ ತಟ್ಟಿಸರ,  ಅವಿನಾಶ ಕೊಪ್ಪ ಕಾಣಿಸಿಕೊಳ್ಳಲಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top