• Slide
    Slide
    Slide
    previous arrow
    next arrow
  • ಜನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಯುವಜನತೆಯಿಂದಾಗಬೇಕು: ಎನ್.ಜಯಚಂದ್ರನ್

    300x250 AD

    ದಾಂಡೇಲಿ: ಜನಪದ ಸಂಸ್ಕೃತಿಗಳು ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವತ್ತ ಇಂದಿನ ಯುವಜನಾಂಗ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಹಿರಿಯ ಪತ್ರಕರ್ತ ಎನ್.ಜಯಚಂದ್ರನ್ ನುಡಿದರು.
    ಅವರು ಕೋಗಿಲಬನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೊತ್ಸವದ ಅಂಗವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ 40 ವರ್ಷಗಳಿಂದ ಸರಕಾರ ಹಾಗೂ ಗ್ರಾಮದ ಜನರ ಸಹಕಾರದಿಂದ ಈ ಶಾಲೆ ಅಭಿವೃದ್ದಿ ಹೊಂದುತ್ತಲಿದ್ದು, ಎರಡು ಬಾರಿ ಹಳಿಯಾಳ ತಾಲೂಕಿನ ಉತ್ತಮ ಆದರ್ಶ ಶಾಲೆಯೆಂದು ಪ್ರಶಸ್ತಿಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ರಮೇಶ ನಾಯ್ಕ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರೆಹಮತ್ ಇಲಾಹಿ ಜುಂಜುವಾಡಕರ್, ಪ್ರವಾಸೋದ್ಯಮಿ ಉಸ್ಮಾನ್.ಎ ಶೇಖ, ಯುವಕ ಮಂಡಳ ಅಧ್ಯಕ್ಷ ಅಮೀನ್ ಷಂಶೇರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಾರ್ವತಿ ಹರಿಜನ, ಸದಸ್ಯರಾದ ಮಂಜುಳಾ ರಾಠೋಡ, ಮಲ್ಲಪ್ಪ ರವೀಂದ್ರ ಪಾಟೀಲ ಉಪಸ್ಥಿತರಿದ್ದು ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿದರು.
    ಇದೇ ಸಂದರ್ಭದಲ್ಲಿ ಗ್ರಾಮದ ನಾಗರಿಕರ ವತಿಯಿಂದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎನ್.ಜಯಚಂದ್ರನ್ ಅವರನ್ನು ಗ್ರಾ.ಪಂ ಅಧ್ಯಕ್ಷರಾದ ಅಶೋಕ ನಾಯ್ಕ ಸನ್ಮಾಯಿಸಿದರು. ಮುಖ್ಯಾಧ್ಯಾಪಕರಾದ ಮಾಯಾ ಸದಾನಂದ ರಾಣೆ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶಿಕ್ಷಕ ರವಿ ಸುತಾರ ವಂದಿಸಿದರು. ನಂತರ ಸಾಂಸ್ಖೃತಿಕ ಕಾರ್ಯಕ್ರಮಗಳು ಜರುಗಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top