• Slide
    Slide
    Slide
    previous arrow
    next arrow
  • ಜೆಎಂಎಫ್‌ಸಿ ತೀರ್ಪು ಎತ್ತಿ ಹಿಡಿದು ಶಿಕ್ಷೆ ಖಾಯಂಗೊಳಿಸಿದ ಜಿಲ್ಲಾ ನ್ಯಾಯಾಲಯ

    300x250 AD

    ಯಲ್ಲಾಪುರ: ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿರುವ ಹಾಗೂ ಕಳ್ಳತನ ಮಾಡಿದ ಆಭರಣಗಳನ್ನು ಸ್ವೀಕರಿಸಿದ್ದ ಆರೋಪಿತರಿಗೆ ಒಟ್ಟು ಐದು ಪ್ರಕರಣಗಳಲ್ಲಿ ಕೆಳ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಶಿರಸಿ ಪೀಠಾಸೀನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎತ್ತಿ ಹಿಡಿದು ಶಿಕ್ಷೆಯನ್ನು ಖಾಯಂಗೊಳಿಸಿದೆ.
    ಪಟ್ಟಣದ ಬೇರೆ ಬೇರೆ ಸ್ಥಳಗಳಲ್ಲಿ ಒಟ್ಟು ಐದು ಪ್ರಕರಣಗಳಲ್ಲಿ ಆರೋಪಿತರಾದ ಮಂಜುನಾಥ ಯಾನೆ ಮಂಜು ಜಂಬಣ್ಣ ಅಗಸ್ತವರ ಮತ್ತು ಮಂಜುನಾಥ ಯಾನೆ ಮಂಜು ಹುಲಿಗೆಪ್ಪ ಗವಾಡಿ ಮನೆಗಳಿಗೆ ನುಗ್ಗಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದು, ಕಳ್ಳತನದ ವಸ್ತುಗಳೆಂದು ತಿಳಿದು ಸಹ ಬಂಗಾರದ ಆಭರಣಗಳನ್ನು ಆರೋಪಿತನಾದ ಪ್ರಮೋದ ಮೋಹನ ಶೇಟ ಈತ ಸ್ವೀಕರಿಸಿದ್ದನು ಎಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
    ವಿಚಾರಣಾ ನ್ಯಾಯಾಲಯ ಯಲ್ಲಾಪುರದ ಜೆಎಂಎಫ್‌ಸಿ ವಾದ, ಆರೋಪಿತರ ಮೇಲೆ ಆಪಾದಿಸಿದಂತೆ ಅಪರಾಧ ಬೆಸಗಿದ್ದು ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಪರಿಗಣಿಸಿ ಆರೋಪಿತರನ್ನು ದೋಷಿ ಎಂದು ನಿರ್ಣಯಿಸಿ 19-4-2022 ರಂದು ಈ ಆರೋಪಿತರಿಗೆ ಮೂರು ವರ್ಷ ಕಾರಾಗೃಹ ವಾಸ ಮತ್ತು 30,000 ದಂಡ ವಿಧಿಸಿ ತೀರ್ಪು ನೀಡಿದ್ದು, ಆರೋಪಿತರ ಪೈಕಿ ಪ್ರಕರಣದ ತೀರ್ಪಿನ ವಿರುದ್ಧ ಮೂರನೇ ಆರೋಪಿ ಪ್ರಮೋದ ಮೋಹನ ಶೆಟ್ ಮೇಲ್ಮನೆಯನ್ನು ಸಲ್ಲಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಪೀಠಾಸೀನ ಶಿರಸಿ ನ್ಯಾಯಾಧೀಶರಾದ ವಿ. ಜಗದೀಶರವರು, 22-2-2023 ರಂದು ನ್ಯಾಯಾಲಯವು ನೀಡಿದ ತೀರ್ಪನ್ನು ಎತ್ತಿ ಹಿಡಿದು ಶಿಕ್ಷೆಯನ್ನು ಖಾಯಂಗೊಳಿಸಿದ್ದಾರೆ.
    ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರಾಜೇಶ ಮಳಗಿಕರ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾದ ಕು. ಝೀನತ್‌ಬಾನು ಇಬ್ರಾಹಿಂ ಶೇಖ್ ವಾದ ಮಂಡಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top