ಶಿರಸಿ: ತಾಲೂಕಿನ ಬದನಗೊಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ದಾಸನಕೊಪ್ಪ ಕರೆಂಟ್ ಗ್ರಿಡ್’ನಿಂದ ಸರಿಯಾಗಿ ಕರೆಂಟ್ ಪೂರೈಕೆಯಾಗದಿರುವುದನ್ನು ಸರಿಪಡಿಸಿ ರೈತರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ವಿನಂತಿಸಿ ದಾಸನಕೊಪ್ಪ ವಿದ್ಯುತ್ ಗ್ರಿಡ್ ವ್ಯಾಪ್ತಿಯ ರೈತರ ಪರವಾಗಿ ರೈತರಾದ ಯುವರಾಜ ಗೌಡ ಸಂತೊಳ್ಳಿ ಹೆಸ್ಕಾಂ ಶಿರಸಿಗೆ ಮನವಿ ಸಲ್ಲಿಸಿದ್ದಾರೆ.
ಒಂದು ವಾರದಿಂದ ಪವರ ಕಟ್ ಮಾಡಲಾಗುತ್ತಿದ್ದು, ಕರೆಂಟ್ ಇರುವ ಸಮಯದಲ್ಲೂ ಪವರ್ ವೋಲ್ಟೇಜ್ ಇರುವುದಿಲ್ಲ. ರೈತರು ಅಡಿಕೆ, ಬಾಳೆ, ಜೋಳ,ಅನಾನಸ್, ಭತ್ತ ಇನ್ನು ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. ಈ ಭಾಗದಲ್ಲಿ ಯಾವುದೇ ಹೊಳೆ ಮತ್ತು ಚಾನಲ್’ಗಳು ಇಲ್ಲದಿರುವ ಕಾರಣ ರೈತರು ರೈತರು ಸಾಲ ಮಾಡಿ ಬೋರವೆಲ್ ಕೊರೆಯಿಸಿ ಅದರಿಂದ 3-4 ಶಿಪ್ಟ್ ಮೂಲಕ ಬೆಳೆಗಳಿಗೆ ನೀರನ್ನು ಬಿಡುತ್ತಿದ್ದರು. ಆದರೆ ಈಗ ಪವರ್ ಕಟಿಂಗ್ ಮತ್ತು ವೋಲ್ವೆಜ್ ಸಮಸ್ಯೆಯಿಂದ ರೈತರು ಒಂದು ಶಿಪ್ಟ್ ನೀರನ್ನೂ ಕೂಡಾ ಬೆಳೆಗಳಿಗೆ ಬಿಡಲು ಸಾಧ್ಯವಾಗದೇ ರೈತರ ಬೆಳೆಗಳು ಒಣಗುತ್ತಿದೆ. ದಾಸನಕೊಪ್ಪ ಗ್ರಿಡ್ ವ್ಯಾಪ್ತಿಯಲ್ಲಿ ಬರುವ ಸಂತೋಳ್ಳಿ, ರಾಮಾಪುರ,ಹೆಬ್ಬತ್ತಿ, ಪಾರ್ಸಿ, ಕಿರವತ್ತಿ, ವದ್ದಲ, ಕಾಳಂಗಿ,ಹೊಸಕೊಪ್ಪ, ಕುಪ್ಪಗಡ್ಡೆ, ಬೆಳ್ಳನಕರಿ, ಮಡಕೆಸರ, ದಾಸನಕೊಪ್ಪ, ರಂಗಾಪುರ, ಬಿಡಕಿಬೈಲ್, ಬದನಗೋಡ ದನಗನಹಳ್ಳಿ ಭಾಗದ ರೈತರೊಂದಿಗೆ ಕರೆಂಟ್ ಸಮಸ್ಯೆ ಕುರಿತು ಸಭೆಯನ್ನು ಕರೆದು, ರೈತರ ಸಮಸ್ಯೆಯನ್ನು ಆಲಿಸಿ ರೈತರ ಬೆಳೆಗಳು ಒಣಗಿರುವುದನ್ನು ಪರೀಶೀಲಿಸಿ, ನಿರಂತರ ವಿದ್ಯುತ್ ವೋಲ್ಟೇಜ್ ಇರುವ ಹಾಗೆ ಕರೆಂಟ್ ಪೂರೈಸಿ ರೈತರ ನೆರವಿಗೆ ಬರಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗೆಯೇ ಯಾವುದೇ ಕ್ರಮ ಕೈಗೊಳ್ಳದೇ ಸಮಸ್ಯೆ ಮುಂದುವರೆದರೆ ಪಕ್ಷಾತೀತವಾಗಿ ರೈತರ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.