ಶಿರಸಿ: ತಾಲೂಕಿನ ಹೆಬ್ಬತ್ತಿ ಗ್ರಾಮದ ರೈತರೊಬ್ಬರ ಅಡಿಕೆ ತೋಟಕ್ಕೆ ಬೆಂಕಿ ತಗುಲಿ ಅಪಾರ ಹಾನಿಯಾದ ಘಟನೆ ಮಾ.3ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ರೇವಣಸಿದ್ದಪ್ಪ ಎಮ್.ಪಾಟೀಲ್ ಎಂಬುವವರ ಅಡಿಕೆ ತೋಟಕ್ಕೆ ನಿರ್ವಹಣೆ ಇಲ್ಲದ ವಿದ್ಯುತ ಟಿ.ಸಿ.ಯಿಂದ ಬೆಂಕಿ ತಗುಲಿ ಸುಮಾರು ಆರನೂರು ಗಿಡ ಭಸ್ಮವಾಗಿದ್ದು, ಅಜಮಾಸ್ ನಾಲ್ಕು ಲಕ್ಷ ಹಾನಿಯಾಗಿದೆ. ರಾಮಾಪುರ, ಹೆಬ್ಬತ್ತಿ ಗ್ರಾಮಸ್ಥರು ಬೆಂಕಿ ಆರಿಸಿದ್ದರಿಂದಇನ್ನೂ ಹೆಚ್ಚಿನ ಅನಾಹುತ ತಪ್ಪಿದೆ.
ಈ ವೇಳೆ ಮಾಜಿ ಗ್ರಾ.ಪಂ.ಅಧ್ಯಕ್ಷ ದೇವರಾಜ ನಾಯ್ಕ್ ಮಾತನಾಡಿ ನಿರ್ವಹಣೆ ಇಲ್ಲದ ಟಿಸಿಯಿಂದ ಹಾಳಾಗಿರುವ ಬೆಳೆಯನ್ನು ಕೆ.ಇ.ಬಿ. ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಂಡಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮಲಸ೯ಜಾ ಎಮ್ ಪಾಟೀಲ್, ದೇವರಾಜ್ ನಾಯ್ಕ್, ಯುವರಾಜ್ ಗೌಡ, ಮಂಜು ಗೌಡ, ದಯಾನಂದ ಆಚಾರಿ , ಮುತ್ತು ಗೌಡ್ರು , ಪ್ರಕಾಶ ದೊಡ್ಡಮನಿ, ತಿಮ್ಮ ವಡ್ಡರ್ , ಪರಶುರಾಮ ಕೊಡಬ್ಬಿ ,ಮೋಹನ್ ಕುಪಟುರೂ, ರಾಘು ದೊಡ್ಡಮನ್ನಿ , ಆರ್.ಕೆ.ನಾಯ್ಕ್ , ವಿನಾಯಕ ನಾಯ್ಕ್ , ನಾಗರಾಜ್ ಹರಿಜನ್, ರಮೇಶ್ ಮಾದರ, ಇನ್ನು ಅನೇಕ ರೈತರು ಹಾಜರಿದ್ದರು.ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.