ಶಿರಸಿ: ಶಿವರಾಮ ಕಾರಂತರು 1968ರಲ್ಲಿ ಬರೆದ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂತು. ಈ ಕಾದಂಬರಿಯಲ್ಲಿ ಕಥಾನಾಯಕರಿಲ್ಲ, ನಾಯಕಿಯರಿಲ್ಲ ಎಂದು ಶಿವರಾಮ ಕಾರಂತರೇ ಹೇಳಿದ್ದಾರೆ. ಆದರೆ ಮೂಕಜ್ಜಿ ಚೈತನ್ಯದ ಸ್ವರೂಪ. ಆಕೆ ನಂಬಿಕೆಯನ್ನು ಪ್ರಶ್ನಿಸುತ್ತಾಳೆ ಎಂದು ಟಿ.ಎಂ.ರಮೇಶ ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ಮಾಸದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪರಿಷತ್‌ನ ರಾಜ್ಯ ಸಮಿತಿ ಸದಸ್ಯ ಜಗದೀಶ ಭಂಡಾರಿ ಅಧ್ಯಕ್ಷತೆ ವಹಿಸಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪ್ರಾರಂಭದಲ್ಲಿ ಗಂಗಾ ಹೆಗಡೆಯವರಿಂದ ಪ್ರಾರ್ಥನೆ ಜರುಗಿತು. ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಪದಕಿ ಸ್ವಾಗತಿಸಿದರು. ವರ್ಗಾಸರ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿಯ ಸಾವಿತ್ರಿ ಶಾಸ್ತ್ರಿ ವಂದಿಸಿದರು. ನಂತರ ನಡೆದ ಪ್ರಶ್ನೋತ್ತರದಲ್ಲಿ ಎಚ್.ಆರ್.ಅಮರನಾಥ, ಟಿ.ಎಂ.ಜಗದೀಶ ಪಾಲ್ಗೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಸಾಹಿತ್ಯ ವಲಯದ ಹಿರಿ- ಕಿರಿಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಮೂಕಜ್ಜಿ ಚೈತನ್ಯದ ಸ್ವರೂಪ, ಆಕೆ ನಂಬಿಕೆಯನ್ನು ಪ್ರಶ್ನಿಸುತ್ತಾಳೆ: ಟಿ. ಎಂ.ರಮೇಶ
