ಹೊನ್ನಾವರ: ತಾಲೂಕಿನ ಗೇರುಸೊಪ್ಪೆಯ ನಂಜೂರಿನಲ್ಲಿರುವ ಶ್ರೀಆದಿಶಕ್ತಿ ಜಗದಂಬಾ ದೇವಸ್ಥಾನದ ರಾಜಗೋಪುರ ಮತ್ತು ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮ ಏ.8ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯಕ್ರಮದ ವಿವರ ನೀಡಿದ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸ್ವಾಗತ ಸಮಿತಿ, ಶರಾವತಿ ತಟದ ಜಡ್ಡಿಕೇರಿಯ ಶ್ರೀಆದಿಶಕ್ತಿ ಜಗದಂಬಾ ದೇವಸ್ಥಾನಕ್ಕೆ ಸುಮಾರು ಎರಡು ಕೋಟಿ ಮೊತ್ತದ 63 ಅಡಿ ಎತ್ತರದ ಭವ್ಯವಾದ ರಾಜಗೋಪುರ ಮತ್ತು ವಿಶಾಲ ಸಭಾಭವನವನ್ನು ಭಕ್ತಾದಿಗಳ ನೆರವಿನಿಂದ ನಿರ್ಮಿಸಲಾಗಿದೆ. ಶ್ರೀ ಆದಿಶಕ್ತಿ ಜಗದಂಬಾ ಮೂಲತಹ ಕೇರಳದ ಕಾಲಡಿಯಲ್ಲಿ ಶ್ರೀಶಂಕರಾಚಾರ್ಯರಿಂದ ಸ್ಥಾಪಿತಳಾಗಿದ್ದಳು. ಹೊನ್ನಾವರದ ಕಟ್ಟೆಮನೆಯ ಚಂದ್ರಭಾಗೀ ಎಂಬ ಭಕ್ತೆಯ ಸಂಕಷ್ಟ ಕಾಲದಲ್ಲಿ ಆಕೆಯ ಕಷ್ಟವನ್ನು ಪರಿಹರಿಸಿ ಅವಳ ಇಚ್ಛೆಯ ಮೇರೆಗೆ ಜಡ್ಡಿಕೇರಿಯಲ್ಲಿ ಬಂದು ನೆಲೆಸಿದ ದೇವಿ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಏ.8, 9 10ರಂದು ಶ್ರೀರಾಜಗೋಪುರ ಮತ್ತು ಸಭಾಭವನದ ಉದ್ಘಾಟನೆ, ವರ್ಧಂತಿ ಉತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಿಯ ದರ್ಶನ ಪಡೆದು ತನುಮನ ಧನಸಹಾಯ ನೀಡಿ ದೇವಿಯ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗುವಂತೆ ಸ್ವರ್ಣವಲ್ಲಿ ಪರಿಷತ್ತಿನ ಅಧ್ಯಕ್ಷ ಎನ್.ಕೆ.ನಾಯಕ್, ರಾಜೇಶ ಸಾಲೆಹಿತ್ತಲ್, ಗ್ರಾಮ ಪಂಚಾಯತಿ ಸದಸ್ಯ ವಿನೋದ ನಾಯ್ಕ ಹಾಗೂ ಸಮಾಜದವರು ವಿನಂತಿಸಿಕೊಂಡಿದ್ದಾರೆ.
ಆದಿಶಕ್ತಿ ಜಗದಂಬಾ ದೇವಸ್ಥಾನದ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಏ.8ರಿಂದ
