Slide
Slide
Slide
previous arrow
next arrow

ಕುಂಠಿಮಹಮ್ಮಾಯಿ ದೇವರ 33ನೇ ವರ್ಷದ ಜಾತ್ರಾ ಮಹೋತ್ಸವ ಸಂಪನ್ನ

300x250 AD

ಕಾರವಾರ: ನಗರದ ಶ್ರೀಕುಂಠಿಮಹಮ್ಮಾಯಿ ದೇವರ 33ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.
ನಗರದ ಜಾಗೃತ ದೇವತೆಯಾದ ಶ್ರೀಕುಂಠಿಮಹಮ್ಮಾಯಿ ಬೇಡಿದ ಭಕ್ತರಿಗೆ ವರ ಕರುಣಿಸುವ ದೇವಿ. ಇದೇ ಕಾರಣದಿಂದಾಗಿ ಕೇವಲ ಕಾರವಾರವಷ್ಟೇ ಅಲ್ಲದೇ, ಪರ ಊರುಗಳಲ್ಲೂ ತನ್ನ ಭಕ್ತರನ್ನು ಹೊಂದಿರುವ ಕುಂಠಿಮಹಮ್ಮಾಯಿಯ ವಾರ್ಷಿಕ ಜಾತ್ರಾ ಮಹೋತ್ಸವವು ಮಂಗಳವಾರ ನವಚಂಡಿ ಹೋಮದಿಂದ ಆರಂಭಗೊಂಡಿತ್ತು. ದೇವಿಯ ಸನ್ನಿಧಿಯಲ್ಲಿ ಕುಂಕುಮಾರ್ಚನೆ, ತುಲಾಭಾರ, ಕರ್ಪೂರ ಆರತಿ, ಉಡಿ ತುಂಬುವುದು ವಿಶೇಷವಾಗಿದ್ದು, ಜಾತ್ರಾ ಸಂದರ್ಭದಲ್ಲಿ ಭೇಟಿ ನೀಡಿದ ನೂರಾರು ಮಂದಿ ಭಕ್ತರು ಇಲ್ಲಿ ತಮ್ಮ ಹರಕೆ ಪೂರೈಸಿ ಧನ್ಯರಾದರು.
ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಮತ್ತು ಕುಟುಂಬದವರು ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡು, ದೇವಿಯ ಅನ್ನ ಪ್ರಸಾದ ಸ್ವೀಕರಿಸಿದರು. ನಂತರ ಸಂಜೆ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ರಾತ್ರಿ ಮಹಾಪೂಜೆ, ಫಲಾವಳಿಗಳ ಲೀಲಾವು ಕಾರ್ಯಕ್ರಮವೂ ನಡೆಯಿತು. ಇನ್ನು ರಾತ್ರಿ ಕೊಂಕಣಿ ಹಾಸ್ಯಭರಿತ ನಾಟಕ ಹಾಂವ್ ಬಸಂತಿ- ಮಾಕ್‌ಜಾಯ್ ಸಂಗಾತಿ ನೆರೆದವರ ಮನರಂಜಿಸಿತು. ಬುಧವಾರ ಕೂಡ ದೇವರಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಅನ್ನ ನೈವೇದ್ಯ, ಮಹಾಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದು ಎರಡು ದಿನಗಳ ಜಾತ್ರಾ ಮಹೋತ್ಸವ ಸಮಾರೋಪಗೊಂಡಿತು.

300x250 AD
Share This
300x250 AD
300x250 AD
300x250 AD
Back to top