ಹೊನ್ನಾವರ: ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಒಯ್ಯುವಲ್ಲಿನ ಸರ್ ಸಿ.ವಿ. ರಾಮನ್’ರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆ.28 ರಂದು ಪಟ್ಟಣದ ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಗಣ್ಯರೆಲ್ಲರನ್ನು ವೇದಿಕೆಗೆ ಆಹ್ವಾನಿಸಿ ಪುಷ್ಪ ನೀಡಿ ಸ್ವಾಗತಿಸಲಾಯಿತು .
ಪ್ರಾರ್ಥನಾ ಗೀತೆಯೊಂದಿಗೆ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯಾತೀತರು ಅತ್ಯಂತ ಉತ್ಸುಕತೆಯಿಂದ, ಸಹನೆಯಿಂದ ಚಿಕ್ಕಮಕ್ಕಳ ಎಲ್ಲ ವಿಜ್ಞಾನ ವಸ್ತು ಪ್ರದರ್ಶನವನ್ನು ವಿವರಣಾತೀತವಾಗಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು .
ಸೇಂಟ್ ಥಾಮಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಎಸ್.ವಾಯ್. ಬೈಲೂರ್ ಮಾತನಾಡಿ ವೈಜಾನಿಕವಾಗಿ ತಯಾರಿಸಿದ ಮಾದರಿಯು ಪ್ರೌಢ ಹಂತಕ್ಕೆ ಸಮನಾದುದು ಎಂದು ಚಿಕ್ಕಮಕ್ಕಳ ಕ್ರಿಯಾಶೀಲ ಚಟುವಟಿಕೆಗಳನ್ನು ಹೊಗಳಿದರು .
ಮುಖ್ಯ ಅತಿಥಿಗಳಾದ ಮಾರ್ಥೋಮ ಶಿಕ್ಷಣ ನಿರ್ದೇಶಕ ಎಚ್.ಎನ್. ಪೈ ಮಾತನಾಡಿ ಸರ್ ಸಿ.ವಿ. ರಾಮನ್ ಜೀವನ ಚರಿತ್ರೆ , ರಾಮನ್ ಪರಿಣಾಮದ ಬಗ್ಗೆ ವಿವರಿಸಿ ಚಿಕ್ಕ ಮಕ್ಕಳಲ್ಲಿರುವ ವಿಜ್ಞಾನದ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು . ಈ ಒಂದು ವಿಜ್ಞಾನ ವಸ್ತು ಪ್ರದರ್ಶನವನ್ನು ತಾಲೂಕು , ಜಿಲ್ಲಾ ಮಟ್ಟದ ಪ್ರದರ್ಶನಕ್ಕೆ ಹೋಲಿಸಿ ಪ್ರಶಂಸೆ ವ್ಯಕ್ತಪಡಿಸಿಯಾರು.
ಸಂಸ್ಥೆಯ ಮುಖ್ಯಸ್ಥರಾದ ರೇ ಫಾದರ್ ಲೀಜೋ ಚಾಕೋ ಖಜಾಂಚಿಗಳಾದ ಕೆ.ಸಿ.ವರ್ಗಿಸ್ ಶುಭ ಹಾರೈಸಿದರು.
ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಥೆರೆಸಾ ಫರ್ನಾಂಡಿಸ್ ವಂದಿಸಿದರು.ಕಾರ್ಯಕ್ರಮಕ್ಕೆ ಮಾರ್ಥೋಮ ಕೇಂದ್ರೀಯ ಶಾಲೆ ಪ್ರಾಂಶುಪಾಲೆ ರಿಂಟು ಚಾಕೋ,ಎನ್ಎಮ್ಎಸ್ ಮುಖ್ಯೋಪಾಧ್ಯಾಯ ಪ್ರೇಮಕಾಂತ ನಾಯ್ಕ್ , ಸ್ಕೌಟ್ & ಗೈಡ್ಸ್ ಜಿಲ್ಲಾ ಹಿರಿಯ ಕಾರ್ಯದರ್ಶಿ ಬಿ.ಡಿ. ಫರ್ನಾಂಡಿಸ್ ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ಶಾಲೆಯ ಶಿಕ್ಷಕ ಕಾರ್ಯದರ್ಶಿ ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು .
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಪುಟ್ಟ ಮಕ್ಕಳೇ ಸ್ವಾಗತಿಸಿ, ನಿರೂಪಿಸಿದರು.