Slide
Slide
Slide
previous arrow
next arrow

ಬೃಹತ್ ಏತ ನೀರಾವರಿ-ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

300x250 AD

ಶಿರಸಿ :ತಾಲೂಕಿನ ಬನವಾಸಿ ಭಾಗದ ರೈತರ ಬಹುಕಾಲದ ಕನಸಾಗಿದ್ದ ಬೃಹತ್ ಏತ ನೀರಾವರಿ – ಕೆರೆ ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಜೊತೆಗೊಡಿ ಫೆ.28ರಂದು ಚಾಲನೆ ನೀಡಿದರು.

ಈ ಬೃಹತ್ ನೀರಾವರಿ ಯೋಜನೆಯಿಂದಾಗಿ ಬನವಾಸಿ ಭಾಗದ 32 ಕೆರೆಗಳು ತುಂಬಲಿದೆ. ಈ ಮೂಲಕವಾಗಿ ಈ ಭಾಗದ ರೈತರು ಬೇಸಿಗೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಅನೂಕುಲವಾಗಲಿದೆ.

300x250 AD

ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ನಿಗಮ ಮಂಡಳಿಯ ಅಧ್ಯಕ್ಷರಾದ ಗೋವಿಂದ ನಾಯ್ಕ ಸೇರಿದಂತೆ ವಿವಿಧಸ್ಥರದ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾಸ್ಥರದ ಅಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top