ಹೊನ್ನಾವರ: ತಾಲೂಕಿನ ಬಳ್ಕೂರ ಕೊಡ್ಲಮನೆ ವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ 81 ವರ್ಷದ ಮಹಾರಥೋತ್ಸವ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಬ್ರಹ್ಮರಥದಲ್ಲಿ ರಥಾರೂಢನಾಗಿದ್ದ ವಿಷ್ಣೂಮೂರ್ತಿಯನ್ನು ರಥ ಎಳೆಯಯುವುದರ ಮೂಲಕ ಭಕ್ತರು ಕೃತಾರ್ಥರಾದರು. ಕೊಡ್ಲಮನೆ ದೇವಸ್ಥಾನದಿಂದ ಪಲ್ಲಕ್ಕಿ ಮೂಲಕ ರಥಬೀದಿಗೆ ತೆರಳಿ ರಥ ಶುದ್ದಿ, ಬಲಿ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು, ರಥರೂಡನಾದ ಮಹಾವಿಷ್ಣುವಿನ ದರ್ಶನ ಪಡೆದಲ್ಲಿ ಜನ್ಮಗಳಿದ ಮಾಡಿದ ಪಾಪಗಳು ರಥವನ್ನು ಮಹಾವಿಷ್ಣು ರಥ ಏರಿದಾಗ ದರ್ಶನ ಪಡೆದರೆ ತಮ್ಮ ಜೀವನದಲ್ಲಿ ಬರುವ ಕಷ್ಟ ದುಖಗಳು ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಈ ವೇಳೆ ಸಿಡಿಮದ್ದುಗಳನ್ನು ಸಿಡಿಸಲಾಯಿತು, ಕಾಮ-ಕ್ರೋದ-ಮದ-ಮತ್ಸರಾದಿಗಳನ್ನು ದೂರಮಾಡುವ ಸಂಕೇತವಾದ ಮೃಗಬೇಟೆ ಪ್ರತಿ ವರ್ಷದಂತೆ ಮೋಳ ನಾಯ್ಕ ಮನೆತನದವರು ನಡೆಸುತ್ತಿದ್ದು ಮೂರನೆ ತಲೆಮಾರಿನ ಶಿವಾನಂದ ನಾಯ್ಕ ನೆರವೇರಿಸಿದರು. ಮಹಾವಿಷ್ಣು ಗೆಳಯರ ಬಳಗ ಮತ್ತು ದುರ್ಗಾಂಬಾ ಗೆಳಯರ ಬಳಗದ ವತಿಯಿಂದ ನಾಟಕ ಪ್ರದರ್ಶನ ಜರುಗಿದವು.