• Slide
    Slide
    Slide
    previous arrow
    next arrow
  • ಯಲ್ಲಾಪುರ ಜಾತ್ರೆ: ಎಟಿಎಂನಲ್ಲಿ ಹಣವಿಲ್ಲದೆ ಗ್ರಾಹಕರ ಪರದಾಟ

    300x250 AD

    ಯಲ್ಲಾಪುರ: ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆ ನಡೆಯುತ್ತಿದ್ದು, ಎಟಿಎಂ ಮೇಲೆ ವಿಶ್ವಾಸ ಇಟ್ಟುಕೊಂಡು ಬಂದ ಬಹಳಷ್ಟು ಜನರಿಗೆ ನಿರಾಶೆಯಾಗಿದೆ. ಇಲ್ಲಿಯ ಎಸ್‌ಬಿಐ ಎಟಿಎಂ ಪ್ರಮುಖ ಎಟಿಎಂ ಆಗಿದ್ದು, ಇರುವ ಮೂರು ಮಿಷನ್‌ನಲ್ಲಿ ಎರಡು ಕೆಟ್ಟು ಹೋಗಿದೆ. ಇನ್ನೊಂದರಲ್ಲಿ ಹಣವೇ ಇಲ್ಲ ಎಂದು ಗ್ರಾಹಕರು ಆಪಾದಿಸುತ್ತಿದ್ದಾರೆ.
    ಜಾತ್ರೆಗೆ ಮೇಲೆ ಬರುವ ಭಕ್ತರು ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಖರ್ಚು ವೆಚ್ಚಗಳು ಇರುತ್ತದೆ. ಇಂದಿನ ದಿನಗಳಲ್ಲಿ ಬಹಳಷ್ಟು ಜನ ಹಣವನ್ನು ತಮ್ಮ ಜೊತೆಗೆ ತೆಗೆದುಕೊಂಡು ಬರುವುದಿಲ್ಲ. ಗ್ರಾಮೀಣ ಭಾಗದಲ್ಲೂ ಕಾಲಿಟ್ಟಿರುವ ಎಟಿಎಂ ಯಂತ್ರಗಳಿವೆ. ಹೀಗಾಗಿ ಪಟ್ಟಣ ಪ್ರದೇಶವಾದ ಯಲ್ಲಾಪುರದಲ್ಲಿ ಎಟಿಎಂ ಮೇಲೆ ವಿಶ್ವಾಸವಿಟ್ಟು ಬಹಳಷ್ಟು ಜನ ಹೊರಪ್ರದೇಶದಿಂದ ಯಲ್ಲಾಪುರಕ್ಕೆ ಬಂದು ಎಟಿಎಂನಲ್ಲಿ ಕಾರ್ಡ್ ಹಾಕಿದಾಗ ಹಣವಿಲ್ಲ ಎಂದು ಕಾಣಿಸುತ್ತಿದೆ.
    ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣ ವ್ಯಾಪ್ತಿಯ ಸಂಭ್ರಮ ಹೋಟೆಲ್ ಪಕ್ಕದಲ್ಲಿ ಎಸ್‌ಬಿಐ ಎಟಿಎಂ ಇದ್ದು, ಒಂದೇ ಸ್ಥಳದಲ್ಲಿ ಮೂರು ಯಂತ್ರಗಳಿವೆ. ಈ ಮೂರು ಯಂತ್ರಗಳಲ್ಲಿ ಎರಡು ಯಂತ್ರಗಳು ಕೆಟ್ಟು ಹೋಗಿದ್ದು, ಇರುವ ಮತ್ತೊಂದು ಡಿಪೋಸಿಟ್ ಮತ್ತು ವಿತ್ ಡ್ರಾ ಯಂತ್ರ ಒಂದೇ ಕೆಲಸ ಮಾಡುತ್ತಿದೆ. ಈ ಯಂತ್ರಕ್ಕೆ ಯಾರಾದರೂ ಹಣ ಹಾಕಿದರೆ, ಮುಂದೆ ಹಣ ತೆಗೆಯಲು ಬಂದ ಗ್ರಾಹಕರಿಗೆ ಹಣ ದೊರೆಯುತ್ತಿದೆ. ಬಾರಿ ವಿಶ್ವಾಸವಿಟ್ಟು ಯಂತ್ರದೊಳಗೆ ಕಾರ್ಡ್ ತುರುಕಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಇಲ್ಲಿಯ ವರ್ಷ ಸ್ಟುಡಿಯೋ ಮಾಲೀಕರಾದ ಪ್ರಕಾಶ ಕಟ್ಟಿಮನಿ ಹೇಳುತ್ತಾರೆ. ಇದು ಕೇವಲ ಪ್ರಕಾಶ ಕಟ್ಟಿಮನಿ ಅವರ ಅನುಭವ ಅಷ್ಟೇ ಅಲ್ಲ, ಬೆಳಿಗ್ಗೆ ಹಾಗೂ ಸಂಜೆ ಸಮಯಕ್ಕೆ ಬಹಳಷ್ಟು ಜನ ಹಣ ಸಿಗದೇ ನಿರಾಸೆಯಿಂದ ನಡೆದಿರುವುದು ಕಂಡುಬಂದಿದೆ.
    9 ದಿನಗಳ ಕಾಲ ನಡೆಯುವ ಜಾತ್ರಾ ಅವಧಿಯಲ್ಲಿ ಬಹಳಷ್ಟು ಜನರಿಗೆ ಹಣದ ಅವಶ್ಯಕತೆ ಇರುತ್ತದೆ. ತಾವು ಉಳಿತಾಯ ಮಾಡಿದ ಹಣವನ್ನು ಎಟಿಎಂ ಮೂಲಕ ತೆಗೆದು ಜಾತ್ರೆ ಅಥವಾ ಇನ್ನಿತರ ವ್ಯವಹಾರ ಮಾಡಲು ಬಳಸಿಕೊಳ್ಳಲು ಅವಕಾಶ ಇದ್ದಾಗಲೂ ಕೂಡ ಬ್ಯಾಂಕಿನ ಅಧಿಕಾರಿಗಳ ನಿರ್ಲಕ್ಷವೋ ಅಥವಾ ಇನ್ನಾವುದೋ ಕಾರಣಕ್ಕಾಗಿ ಜನರಿಗೆ ನಿರಾಸೆಯಾಗುತ್ತಿದೆ. ನಿನ್ನೆ ಶನಿವಾರ ಇಂದು ರವಿವಾರ ಬ್ಯಾಂಕಿಗೆ ರಜೆ ಇರುವ ಕಾರಣಕ್ಕೆ ಬಹುತೇಕವಾಗಿ ಎಟಿಎಂ ಯಂತ್ರಗಳಿಗೆ ಹಣ ಹಾಕಿರಲಿಲ್ಲ ಎಂದು ಹೇಳಲಾಗುತ್ತಿದೆ. ಇನ್ನಿತರ ದಿನಗಳಿಗೂ ಹಾಗೂ ಜಾತ್ರಾ ಅವಧಿಗೂ ಬಹಳಷ್ಟು ವ್ಯತ್ಯಾಸವಿದ್ದು ಸಾವಿರಾರು ಜನ ಎಟಿಎಂ ಯಂತ್ರವನ್ನು ಅವಲಂಬಿಸಿ ಜಾತ್ರೆಗೆ ಆಗಮಿಸುತ್ತಿದ್ದು, ಇನ್ನೂ ಕೆಲವು ದಿನ ಜಾತ್ರೆ ನಡೆಯುವುದರಿಂದ ಬ್ಯಾಂಕಿನ ಅಧಿಕಾರಿಗಳು ಎಟಿಎಂ ಯಂತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹಾಕಬೇಕು ಮತ್ತು ಕೆಟ್ಟಿರುವ ಎರಡು ಯಂತ್ರಗಳನ್ನು ದುರಸ್ತಿ ಮಾಡಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top