ಶಿರಸಿ : ತಾಲೂಕಿನ ಹೆಗಡೆಕಟ್ಟಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿಗೊಂಡ ಶ್ರೀಮತಿ ಉಮಾಬಾಯಿ ವೆಂಕಟ್ರಮಣ ಹೆಗಡೆ ಇವರಿಗೆ ಮಾರ್ಚ್ 1, ಬುಧವಾರದಂದು ಮಧ್ಯಾಹ್ನ 3 ಘಂಟೆಗೆ ಬೀಳ್ಕೊಡುಗೆ ಸಮಾರಂಭ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ.ಎಂ.ಸಿ. ಅಧ್ಯಕ್ಷ ದೇವರು ಹೆಗಡೆ, ಹೆಗಡೆಕಟ್ಟಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಶಿವಳ್ಳಿ ಅಧ್ಯಕ್ಷೆ ಶ್ರೀಮತಿ ವೀಣಾ ಭಟ್ಟ, ಸಾ.ಶಿ.ಇ.ಉಪನಿರ್ದೇಶಕ ಬಸವರಾಜ ಪಿ.,ಕ್ಷೇತ್ರಶಿಕ್ಷಣಾಧಿಕಾರಿ ಎಂ. ಎಸ್. ಹೆಗಡೆ, ಸುರೇಶ ಪಟಗಾರ, ಎಂ.ಆರ್. ಹೆಗಡೆ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಚೈತನ್ಯ ಪಿ.ಯು. ಕಾಲೇಜಿನ ಸಂಸ್ಕೃತ ಉಪನ್ಯಾಸಕ ಅನಂತಮೂರ್ತಿ ವಿಶೇಷ ಉಪನ್ಯಾಸ ನೀಡಲಿದ್ದು, ನಂತರ ರಾತ್ರಿ 9 ಘಂಟೆಗೆ ಶಾಲಾಭಿವೃದ್ಧಿಯ ಸಹಾಯಾರ್ಥ ‘ಭಸ್ಮಾಸುರ ಮೋಹಿನಿ’ ಎಂಬ ಸಮಯಮಿತಿಯ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಾಲೆಯ ಹಳೆ ವಿದ್ಯಾರ್ಥಿಗಳು, ಮತ್ತು ಪಾಲಕರು ಹಾಗೂ ಶಿಕ್ಷಣಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಮಾ.1ಕ್ಕೆ ಹೆಗಡೆಕಟ್ಟಾ ಸ.ಹಿ.ಪ್ರಾ. ಶಾಲಾ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ
