• Slide
    Slide
    Slide
    previous arrow
    next arrow
  • ದಾಂಡೇಲಿಯಲ್ಲಿ ಕದಂಬ ಜ್ಯೋತಿ ರಥಕ್ಕೆ ಭವ್ಯ ಸ್ವಾಗತ

    300x250 AD

    ದಾಂಡೇಲಿ: ಎರಡು ದಿನಗಳವರೆಗೆ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದ ನಿಮಿತ್ತ ಆಗಮಿಸಿರುವ ಕದಂಬ ಜ್ಯೋತಿ ರಥಕ್ಕೆ ಸೋಮವಾರ ತಾಲೂಕಾಡಳಿತ ಮತ್ತು ನಗರಾಡಳಿತದಿಂದ ನಗರದ ಕೆ.ಸಿ.ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
    ಕೆ.ಸಿ.ವೃತ್ತಕ್ಕೆ ಕದಂಬ ಜ್ಯೋತಿ ರಥ ಆಗಮಿಸುತ್ತಿದ್ದಂತೆಯೆ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಮತ್ತು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮನ್ನವರ ಅವರು ಕದಂಬ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಸುಭಾಷ್ ಬೋವಿವಡ್ಡರ, ತಹಶೀಲ್ದಾರ್ ಕಚೇರಿಯ ರಾಘವೇಂದ್ರ ಪಾಟೀಲ್, ಗೋಪಿ ಚೌವ್ಹಾಣ್, ದೀಪಾಲಿ ಪೆಡ್ನೇಕರ್, ಮುಕುಂದ, ಗೌಡಪ್ಪ ಬನಕದಿನ್ನಿ, ರವಿ ಕಮ್ಮಾರ್, ದಯಾನಂದ ಚಿಟ್ಟಿ, ನಗರ ಸಭೆಯ ಅಧಿಕಾರಿಗಳಾದ ವಿ.ಎಸ್.ಕುಲಕರ್ಣಿ, ಬಾಳು ಗವಾಸ್, ನಾಗರಾಜ ತೇರದಾಳ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top