ಕಾರವಾರ: ನೆಹರು ಯುವ ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2 ಹುದ್ದೆಯಂತೆ ತಾತ್ಕಾಲಿಕವಾಗಿ ಒಂದು ವರ್ಷ ಅಥವಾ 2 ವರ್ಷದ ಅವಧಿಗೆ ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ.
ರಾಷ್ಟ್ರೀಯ ಯುವ ಕಾರ್ಯಕರ್ತರ ಹುದ್ದೆಗೆ ಎಸ್ಎಸ್ಎಲ್ಸಿ ತೇರ್ಗಡೆ ಹೊಂದಿರಬೇಕು. 18ರಿಂದ 29 ವಯೋಮಾನದವರಾಗಿರಬೇಕು. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಂಸ್ಥೆ, ಸರಕಾರಿ, ಅರೆ ಸರಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರಬಾರದು. ಇದೊಂದು ಪೂರ್ಣಕಾಲಿಕ ಹುದ್ದೆಯಾಗಿದ್ದು, ಸಾಮಾಜಿಕ ಕಳಕಳಿಯುಳ್ಳ ಅಭ್ಯರ್ಥಿಗಳು ಸ್ವ ಇಚ್ಛೆಯಿಂದ ತಮ್ಮ ಪೂರ್ಣ ವಿವರಗಳೊಂದಿಗೆ ಅರ್ಜಿಯನ್ನು ಎಲ್ಲ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಸಲ್ಲಿಸತಕ್ಕದ್ದು. ಆಯ್ಕೆಯಾದವರಿಗೆ ಗೌರವ ಧನ ರೂ.5000 ಮಾತ್ರ ತಿಂಗಳಗೆ ನೀಡಲಾಗುವದು.
ಆಸಕ್ತರು ಮಾ.9ರೊಳಗೆ ಕಚೇರಿ ವೆಬ್ಸೈಟ್ http://nyks.nic.in ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382- 226 965, 94499 92195ಗೆ ಸಂಪರ್ಕಿಸಿ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.