ಶಿರಸಿ: ಕದಂಬೋತ್ಸವ 2023ರ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಫೆ.27ರಂದು ಗುಡ್ನಾಪುರದ ರಾಣಿ ನಿವಾಸದಲ್ಲಿ ಹಾಗೂ ಮಾ.1ರಂದು ಕದಂಬ ವೇದಿಕೆಯಲ್ಲಿ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸಕ್ತ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಫೆ.26ರ ಒಳಗಾಗಿ ಶಿಕ್ಷಣ ಸಂಯೋಜಕ ಎಂ.ಕೆ.ನಾಯ್ಕ (ಮೊ.ಸಂ: 9845138528), ಶಿಕ್ಷಣ ಸಂಯೋಜಕ ಸತೀಶ್ ಮಡಿವಾಳ (ಮೊ.ಸಂ: 8762152059) ಅವರನ್ನು ಸಂಪರ್ಕಿಸಬಹುದಾಗಿದೆ. ಚಿತ್ರಕಲೆಯ ವಿಷಯ: ಕನ್ನಡ ನಾಡಿನ ಐತಿಹಾಸಿಕ ಗತವೈಭವ. ಸ್ಪರ್ಧೆಗಳಲ್ಲಿ ಪ್ರತಿಭಾ ಕಾರಂಜಿಯ ಎಲ್ಲ ನಿಯಮಗಳು ಅನ್ವಯವಾಗುತ್ತದೆ.
ಕದಂಬೋತ್ಸವ:ಶಾಲಾ ಮಕ್ಕಳಿಗಾಗಿ ಸ್ಪರ್ಧೆ ಆಯೋಜನೆ
