Slide
Slide
Slide
previous arrow
next arrow

ಹ್ಯಾಮರ್ ಥ್ರೋನಲ್ಲಿ ಬಂಗಾರದ ಪದಕ: ಹೊಸ ದಾಖಲೆ ಬರೆದ ಜಿಲ್ಲೆಯ ಕುವರಿ

300x250 AD

ಸಿದ್ದಾಪುರ: ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರೌಢಶಾಲಾ ಮಕ್ಕಳ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯಾ ನಾಯ್ಕ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ 38.90 ಮೀಟರ್ ದೂರ ಎಸೆದು ರಾಜ್ಯದಲ್ಲೇ ಹೊಸ ದಾಖಲೆ ಬರೆದು ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.


ಇವಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ್ ವಿ. ಕುರುಬರ್ ತರಬೇತಿಯನ್ನು ನೀಡಿದ್ದು, ಇವಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಪಕಿ ಮೀನಾ ಬೋರ್ಕರ್, ಎಲ್ಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಶುಭಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top