ಕುಮಟಾ: ಸರ್ಕಾರ ಒಂದು ಉದ್ದೇಶ ಇಟ್ಟುಕೊಂಡು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದನ್ನು ಸಫಲವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ತಾಲೂಕಿನ ಬರ್ಗಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತ, ತಾಲೂಕಾ ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ಇಲ್ಲಿನ ಸಾರ್ವಜನಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಲಿಖಿತವಾಗಿ ನೀಡಿ ಹಾಗೂ ಸಾಮೂಹಿಕ ಸಮಸ್ಯೆಗಳೂನ್ನು ನೇರವಾಗಿ ತಿಳಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ವೈಯಕ್ತಿಕ ಸಮಸ್ಯೆಗಳಿಗೆ ಸಲ್ಲಿಸಿದ ಮನವಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಿ ಕೂಡಲೆ ಅಂತಹ ಮನವಿಗಳನ್ನು ಇತ್ಯರ್ಥಪಡಿಸಿ ಪರಿಹಾರ ಒದಗಿಸಿಕೊಡಲಾಗುವುದು ಎಂದರು.
ಸಾರ್ವಜನಿಕರು ಬಸ್ಸು, ಒತ್ತುವರಿ ಹಾಗೂ ಕಂದಾಯ ಇಲಾಖೆಯ ಸರ್ವೇಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವುಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ಅವುಗಳಿಗೆ ಪೂರಕವಾದ ಪರಿಹಾರ ಒದಗಿಸಲಾಗುವುದು ಎಂದರು.
ತಹಶೀಲ್ದಾರ್ ವಿವೇಕ್ ಶೇಣ್ವಿ ಮಾತನಾಡಿ, ಸರ್ಕಾರ ಆದೇಶದಂತೆ ಪ್ರತಿ 3ನೇ ಶನಿವಾರ ಜಿಲ್ಲೆಯ ಆಯ್ದ ಗ್ರಾಮವನ್ನು ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮ ಮಾಡುವುದು ವಾಡಿಕೆ ಹಾಗೇ ಈ ದಿನ ಬರ್ಗಿ ಗ್ರಾಮವನ್ನು ಆಯ್ಕೆ ಮಾಡಿ ಇಲ್ಲಿನ ಜನರ ಅಹ್ವಾಲು ಸ್ವೀಕರಿಸಿ ಮತ್ತು ಅವರುಗಳ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಬರ್ಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆಯ ಯೋಜನೆಯಿಂದ ಭೂಮಿ ಕಳೆದು ಕೊಂಡಿದವರಿಗೆ ಪರಿಹಾರ, ಅಂಗನವಾಡಿ ಶಾಲೆ ಕಳಪೆ ಕಾಮಗಾರಿಗೆ ಪರಿಹಾರ, ಗ್ರಾಮದಲ್ಲಿ ವಿದ್ಯತ್, ರೋಡ್ ಡಾಂಬರಿಕಾರಣ, ಚರಂಡಿಗೆ ಪೈಪ್, ರಸ್ತೆ ಪಕ್ಕಾ ಚರಂಡಿ ನಿರ್ಮಾಣ, ಬೇಟಕುಳಿ ಸರ್ವಿಸ್ ರಸ್ತೆ,, ಶಾಲಾ ಕೊಠಡಿಗಳ್ ನಿರ್ಮಾಣ, ಶುದ್ಧ ಕುಡಿಯುವ ನೀರು, ಬಾವಿಗಳಿಗೆ ಉಪ್ಪು ನೀರು ಸೇರ್ಪಡೆಗೆ ಪರಿಹಾರ, ಬಸ್ಸು ನಿಲುಗಡೆಗೆ ವ್ಯವಸ್ಥೆ, ಪಿಂಚಣಿ, ಸಮುದಾಯದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕ, ಸಮುದಾಯ ಭವನ ಸ್ವಚ್ಛತೆ, ಮುಂತಾದ ಸಾರ್ವಜನಿಕ ಮನವಿಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು ಹಾಗೂ ಅವುಗಳಿಗೆ ಸೂಕ್ತ ಪರಿಹಾರವನ್ನು ಈ ಕೂಡಲೆ ಒದಗಿಸುವಂತೆ ಸಂಬAಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ವದಗಿಸಿರುವ ಬಗ್ಗೆ ಕೂಡಲೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ನಡೆದ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಅಂಗವಿಕಲ ಪೋಷಿತ್ ವೇತನ, ನಿರ್ಗತಿಕ ವಿಧವಾ ವೇತನ, ಸಂದ್ಯಾ ಸುರಕ್ಷಗಳ ಮಂಜೂರಾತಿ ಆದೇಶ ಪ್ರತಿಗಳನ್ನು ಫಲನುಭವಿಗಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್, ಗ್ರಾಮ ಪಂಚಾಯತ್ ಅಧ್ಯಕ್ಷ ವಿಶಾಲಾಕ್ಷಿ ಪಟಗಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ, ತಾಲೂಕ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ನಾಗರತ್ನ ನಾಯ್ಕ, ಎಸಿಎಫ್ ಲೋಹಿತ್, ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.