• Slide
    Slide
    Slide
    previous arrow
    next arrow
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆರ್.ವಿ.ದೇಶಪಾಂಡೆ ಚಾಲನೆ

    300x250 AD

    ಜೊಯಿಡಾ: ತಾಲೂಕಿನ ರಾಮನಗರ ಜಿ.ಪಂ. ಭಾಗದಲ್ಲಿ ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ ಜಿ.ಪಂ. ಇಲಾಖೆಯ ಹಾಗೂ ಸಣ್ಣ ನೀರಾವರಿ ಇಲಾಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೊಯಿಡಾ ತಾಲೂಕು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ರಸ್ತೆ, ಸೇತುವೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ತಾಲೂಕಿನ ಅಭಿವೃದ್ಧಿಗಾಗಿ ಕೋಟ್ಯಾಂತರ ಹಣ ನೀಡಲಾಗಿದೆ. ರಾಮನಗರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದು, ಇಳವಾ ದಾಬೆಯಿಂದ ರಾಮನಗರ ಜನತೆಗೆ ನೀರಿನ ವ್ಯವಸ್ಥೆ ಮಾಡಬೇಕಿದೆ ಎಂದರು.
    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಮಾಜಿ ಜಿ.ಪಂ. ಸದಸ್ಯ ಸಂಜಯ ಹಣಬರ, ಕೃಷ್ಣ ದೇಸಾಯಿ, ಗುರುನಾಥ ಕಾಮತ್, ಜಿ.ಪಂ. ಇಲಾಖೆಯ ಎಇಇ ಮಹಮ್ಮದ್ ಇಝಾನ್, ಪ್ರವೀಣ್, ಲೋಕೋಪಯೋಗಿ ಇಲಾಕೆಯ ವಿಜಯಕುಮಾರ್, ಸಣ್ಣ ನೀರಾವರಿ ಇಲಾಕೆಯ ಎಇಇ ವಿರೇಶ ಬಿಜಾಪುರ ಇತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top