ಶಿರಸಿ: ನಗರದ ಮರಾಠಿಕೊಪ್ಪದ ಅಜಿತ ಮನೋಚೇತನಾ ವಿಕಾಸ ಶಾಲಾ ಆವರಣದಲ್ಲಿ ಮಾರ್ಚ್ 2, ಗುರುವಾರದಂದು ರಜತಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಜತಮಹೋತ್ಸವ ಸಮಾರಂಭದಲ್ಲಿ ವೃತ್ತಿ ತರಬೇತಿ ಕೇಂದ್ರಕ್ಕೆ ಶಂಖು ಸ್ಥಾಪನೆ, ದಾನಿಗಳಿಗೆ ಸಾಧಕರಿಗೆ ಸನ್ಮಾನ, ವ್ಯಸನ ಮುಕ್ತಿ ಜಾಗೃತಿ ತರಬೇತಿ ಅಭಿಯಾನಕ್ಕೆ ಚಾಲನೆ, ಮಹಿಳಾಗೋಷ್ಠಿ, ವಿಕಲಚೇತನರ ಸೇವಾ ಸಂಸ್ಥೆಗಳ ಜೊತೆ ಸಂವಾದ, ಸಮಾರೋಪ ಸಮಾರಂಭ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದಾ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಇವರ ದಿವ್ಯ ಸಾನ್ನಿದ್ಯದಲ್ಲಿ ಸಮಾರಂಭ ನಡೆಯಲಿದೆ.
ಅಂದು ಬೆಳಿಗ್ಗೆ 10-30 ಕ್ಕೆ -ವೃತ್ತಿ ತರಬೇತಿ ಕೇಂದ್ರ ಶಂಕು ಸ್ಥಾಪನೆ ಮಾಡಿ ಸಮಾರಂಭದ ಅಧ್ಯಕ್ಷತೆಯನ್ನುಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿ ವಹಿಸಲಿದ್ದಾರೆ. ರಜತ ಮಹೋತ್ಸವ ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ನಡೆಸಲಿದ್ದು, ಅದಮ್ಯ ಚೇತನದ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ ದಾನಿಗಳಿಗೆ ಸನ್ಮಾನ ಮಾಡಲಿದ್ದಾರೆ. ಅಜಿತ ಮನೋಚೇತನಾ ಸಚಿತ್ರ ವರದಿ ಪತ್ರಿಕೆ ಬಿಡುಗಡೆಯನ್ನು ಹಿಂದು ಸೇವಾ ಪ್ರತಿಷ್ಠಾನ ಸಂಚಾಲಕ ಸುಧಾಕರ ನಡೆಸಿಕೊಡಲಿದ್ದಾರೆ.
ಪೋಟೋ ಪ್ರದರ್ಶನ ಉದ್ಘಾಟನೆಯನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ನಡೆಸಿಕೊಡಲಿದ್ದು, ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ ನಂತರ 2-30 ಕ್ಕೆ ಸಮಾಜ ಕಾರ್ಯದಲ್ಲಿ ಮಹಿಳೆಯರ ಸಂವಾದಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀಮತಿ ತೇಜಸ್ವಿನಿ ಅನಂತ ಕುಮಾರ ವಹಿಸಲಿದ್ದು ಸಮಾರೋಪ ಸಮಾರಂಭ 3-30 ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ವಿಶೇಷ ಸನ್ಮಾನ : ಖ್ಯಾತ ಮನೋವೈದ್ಯ ಡಾ. ಶ್ರೀನಿವಾಸ ಕುಲಕರ್ಣಿ ಇವರನ್ನು ಡಾ| ವಿಜಯಲಕ್ಷ್ಮಿ ದೇಶಮಾನೆ ಸನ್ಮಾನಿಸಲಿದ್ದಾರೆ.
ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಡಾ.ಬಿ.ಎನ್. ಗಂಗಾಧರ ಇವರು ಸಮಾರೋಪ ಭಾಷಣ ಮಾಡಲಿದ್ದು, ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರತಿಕಾ ಗೋಷ್ಠಿಯಲ್ಲಿ ಅಜಿತ ಮನೋಚೇತನಾ ಟ್ರಸ್ಟ ಅಧ್ಯಕ್ಷ ಸುಧೀರ ಭಟ್ಟ,ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ಟ್ರಸ್ಟಿ ವಿ.ಆರ್. ಹೆಗಡೆ ಹೊನ್ನೆಗದ್ದೆ,ಡಾ. ಜಿ.ಎಂ. ಹೆಗಡೆ, ಪ್ರೋ.ರವಿ ನಾಯ್ಕ, ಉದಯ ಸ್ವಾದಿ, ವಿನಾಯಕ ಭಟ್ಟ, ವಿಕಾಸ ಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ನರ್ಮದಾ ಹೆಗಡೆ ಉಪಸ್ಥಿತರಿದ್ದರು.